ಕರ್ನಾಟಕ

karnataka

ETV Bharat / state

ಕಳೆದ ಬಾರಿಗಿಂತ ಓಟಿಂಗ್​ ಜಸ್ಟ್ ಒಕೆ: ಎಲ್ಲಿ ಕ್ಷೇತ್ರಗಳಲ್ಲಿ ಉತ್ತಮ, ಎಲ್ಲಿ ಕಡಿಮೆ ಮತದಾನ?!

ರಾಜ್ಯದಲ್ಲಿ ನಿನ್ನೆ ನಡೆದ ಲೋಕಸಭಾ ಚುನಾವಣೇಯ ಮೊದಲ ಹಂತದ ಮೊದಲ ಹಂತ ಮತದನಾ ಪ್ರಕ್ರಿಯೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಮತದಾನ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ.. ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ಎಂಬ ಸಂಪೂರ್ಣ ಚಿತ್ರಣ ಇಲ್ಲಿದೆ.

By

Published : Apr 19, 2019, 8:02 PM IST

ಮತದಾನ

ಬೆಂಗಳೂರು: ನಿನ್ನೆ ರಾಜ್ಯದಲ್ಲಿ ನಡೆದ ಮೊದಲ‌ ಹಂತದ ಲೋಕಸಮರ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಆದರೆ, 14 ಕ್ಷೇತ್ರಗಳಲ್ಲಿನ ಮತದಾನ ಸ್ವಲ್ಪ ನಿರಾಶಾದಾಯಕವಾಗಿದ್ದರೂ, ಕಳೆದ ಬಾರಿಗಿಂತ ಅಲ್ಪ ಏರಿಕೆ ಕಂಡಿದೆ.

ಲೋಕಸಮರದ ಮೊದಲ ಹಂತದ ಚುನಾವಣೆ ಸುಸೂತ್ರವಾಗಿ ನಡೆದಿದೆ. ಆದರೆ, ಈ ಬಾರಿಯೂ ಮತದಾನಕ್ಕೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾನ ಪ್ರಮಾಣ ಹೆಚ್ಚಾಗುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನಾನಾ ಕಸರತ್ತು ನಡೆಸುತ್ತದೆ. ಆದರೆ ವಾಸ್ತವದಲ್ಲಿ ಪ್ರತಿ ಬಾರಿಯೂ ಮತದಾನದ ಪ್ರಮಾಣ ನಿರಾಶಾದಾಯಕವಾಗಿರುತ್ತದೆ. ಈ ಬಾರಿಯೂ ಮೊದಲ‌ ಹಂತದ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಮತದಾನ ಕಂಡಿಲ್ಲ. ಚುನಾವಣಾ ಆಯೋಗದ ಅಂತಿಮ ಅಂಕಿಅಂಶದ ಪ್ರಕಾರ ರಾಜ್ಯದ 14 ಕ್ಷೇತ್ರಗಳಲ್ಲಿ ಒಟ್ಟು 68.81ಶೇ. ಮತದಾನವಾಗಿದೆ. 2014 ಲೋಕಸಭಾ ಚುನಾವಣೆಯಲ್ಲಿ ಈ 14 ಕ್ಷೇತ್ರಗಳಲ್ಲಿ 68.68ಶೇ. ಮತ ಚಲಾವಣೆ ಆಗಿದೆ. ಕೇವಲ 0.13ಶೇ. ಅಲ್ಪ ಏರಿಕೆ ಕಂಡಿದೆ.

ನಿನ್ನೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ 2014 ಚುನಾವಣೆಗಿಂತ ಅಧಿಕ ಮತದಾನವಾಗಿದ್ದರೆ, ಬೆಂ.ಗ್ರಾಮಾಂತರ ಸೇರಿ ಬೆಂಗಳೂರು ನಗರದ‌ ಮೂರು ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ಮತದಾನವಾಗಿದೆ.

ಬೆಂಗಳೂರಿನಲ್ಲಿ ಪ್ರತಿ ಬಾರಿಯಂತೆ ಕಡಿಮೆ ಮತದಾನ:

ಬೆಂಗಳೂರು ಗ್ರಾಮಾಂತರ ಸೇರಿ ಬೆಂ.ಉತ್ತರ, ದಕ್ಷಿಣ, ಕೇಂದ್ರದಲ್ಲಿ ಕಳಪೆ ಮತದಾನ ಮುಂದುವರಿದಿದೆ. ಈ ಬಾರಿ ಬೆಂಗಳೂರು ಮೂರು ಕ್ಷೇತ್ರದಲ್ಲಿ ಸರಾಸರಿ 54.13ಶೇ. ಮತದಾನ ನಡೆದಿದೆ. ಅದೇ 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಸರಾಸರಿ 55.97ಶೇ. ಮತದಾನವಾಗಿತ್ತು. ಅಂದರೆ 2014ರಿಂದ ಈ ಬಾರಿ 1.84ಶೇ.‌ ಮತದಾನ ಕಡಿಮೆಯಾಗಿದೆ.

ಬೆಂಗಳೂರಲ್ಲಿ ಮತದಾನ ಪ್ರಮಾಣ ಇಳಿಕೆ:


2019 2014 ಇಳಿಕೆ

ಬೆಂ.ಗ್ರಾಮಾಂತರ 64.90% 66.45%. 1.55%

ಬೆಂ.ಉತ್ತರ. 54.62%. 56.53%. 1.91%

ಬೆಂ.ಕೇಂದ್ರ. ‌‌ 54.29%. 55.64% 1.35%

ಬೆಂ.ದಕ್ಷಿಣ. 53.48% 55.75%. 2.27%

ಎಲ್ಲೆಲ್ಲಿ ಮತದಾನ ಹೆಚ್ಚಳ?:
2019 2014 ಹೆಚ್ಚಳ

ಉಡುಪಿ,ಚಿಕ್ಕಮಗಳೂರು75.91% 74.56% 1.35%

ಹಾಸನ. 77.08% 73.49% 3.59%

ದ.ಕನ್ನಡ. 77.90%. 77.15%. 0.75%

ಚಿತ್ರದುರ್ಗ. 70.73%. 66.07%. 4.66%

ತುಮಕೂರು 77.17%. 72.57%. 4.6%

ಮಂಡ್ಯ. 80.24%. 71.47% 8.77%

ಮೈಸೂರು 69.30%. 67.30%. 2%

ಚಾಮರಾಜನಗರ. 75.15%. 72.85% 2.3%

ಚಿಕ್ಕಬಳ್ಳಾಪುರ. 76.78%. 76.21% 0.57%

ಕೋಲಾರ. 77.14%. 75.51% 1.63%

ABOUT THE AUTHOR

...view details