ಬೆಂಗಳೂರು :ಅನಾರೋಗ್ಯದ ನಡುವೆಯೂ ಮಾಜಿ ಸಚಿವ ಹೆಚ್.ಎಂ ರೇವಣ್ಣ ಮಹಾಲಕ್ಷ್ಮೀಲೇಔಟ್ ಬಳಿಯ ಅಂಬೇಡ್ಕರ್ ಮೆಮೋರಿಯಲ್ ಕಾಲೇಜಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ಅನಾರೋಗ್ಯದ ನಡುವೆಯೂ ಹಕ್ಕು ಚಲಾಯಿಸಿದ ಮಾಜಿ ಸಚಿವ ಹೆಚ್.ಎಂ ರೇವಣ್ಣ
ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಸಚಿವ ಹೆಚ್.ಎಂ ರೇವಣ್ಣ ವೈದ್ಯರ ಸಲಹೆ ಮೇರೆಗೆ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವಿಕ್ರಂ ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.
ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಸಚಿವ ರೇವಣ್ಣ ವೈದ್ಯರ ಸಲಹೆ ಮೇರೆಗೆ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವಿಕ್ರಂ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ರು.
ಮತದಾನದ ಬಳಿಕ ಮಾತನಾಡಿದ ಅವರು, ನನಗೆ ಸ್ಪೈನಲ್ ಕಾರ್ಡ್ ಸಮಸ್ಯೆಯಿದೆ. ಎರಡು ತಿಂಗಳು ವಿಶ್ರಾಂತಿಗೆ ವೈದ್ಯರು ಹೇಳಿದ್ದಾರೆ. ನಾಲ್ಕು ವಾರದಿಂದ ಆಸ್ಪತ್ರೆಯಲ್ಲೇ ಇದ್ದೇನೆ. ಇದೊಂದು ಉತ್ತಮ ಅವಕಾಶ. ಅದಕ್ಕೆ ತಪ್ಪಿಸಿಕೊಳ್ಳಬಾರದೆಂದು ಬಂದು ಮತದಾನ ಮಾಡಿದ್ದೇನೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಗರಪ್ರದೇಶದಲ್ಲಿ ಉತ್ತಮ ಎಜುಕೇಟೆಡ್ಗಳಿದ್ದಾರೆ, ಅವರ್ಯಾಕೆ ಇದರಿಂದ ತಪ್ಪಿಸಿಕೊಳ್ತಾರೋ ಗೊತ್ತಿಲ್ಲ ಎಂದ್ರು.