ಕರ್ನಾಟಕ

karnataka

ETV Bharat / state

ಚೆಕ್‌ ಬೌನ್ಸ್ ಪ್ರಕರಣ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​ ಪೊಲೀಸ್ ಕಸ್ಟಡಿಗೆ

ಅನೇಕ ಬಾರಿ‌ ನ್ಯಾಯಾಲಯ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​. ಈಗ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ. 2015 ರ ಚೆಕ್ ಬೌನ್ಸ್ ಪ್ರಕರಣ ಸಂಬಂಧ ಆದೇಶ.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್

By

Published : Apr 10, 2019, 11:36 PM IST

ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧಪಟ್ಟಂತೆ ಅನೇಕ ಬಾರಿ‌ ನ್ಯಾಯಾಲಯ ನೋಟಿಸ್ ನೀಡಿದರೂ ಬಾಬುರಾವ್ ಚಿಂಚನಸೂರ್ ವಿಚಾರಣೆಗೆ ಗೈರಾಗಿದ್ದರು.​ ಹೀಗಾಗಿ ಏ.8 ರಂದು ವಾರೆಂಟ್ ಜಾರಿ ಮಾಡಿ ಬಂಧಿಸಿ ತರುವಂತೆ ಪೊಲೀಸರಿಗೆ ನ್ಯಾಯಾಲಯ ಖಡಕ್ ಸೂಚನೆ ನೀಡಿತ್ತು. ಇಂದು ಕೇಸ್ ರೀಕಾಲ್ ಮಾಡಿಸಿಕೊಳ್ಳಲು ಬಾಬುರಾವ್ ಕೋರ್ಟ್​ಗೆ ಬಂದಿದ್ದರು. ಈ ವೇಳೆ ಚಿಂಚನಸೂರ್​ರನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?

2015 ರಲ್ಲಿ ಚೆಕ್ ಬೌನ್ಸ್​ಗೆ ಸಂಬಂಧಿಸಿದಂತೆ ಅಂಜನಾ ಶಾಂತವೀರ್ ಎಂಬವರು ಚಿಂಚನಸೂರ್ ವಿರುದ್ದ ದೂರು ದಾಖಲಿಸಿದ್ದರು. ಅಂಜನಾ ಅವರಿಗೆ ಚಿಂಚನಸೂರ್​ ನೀಡಿದ್ದ 11 ಕೋಟಿ 88 ಲಕ್ಷ ರೂ ಚೆಕ್ ನೀಡಿದ್ದರು. ಆದ್ರೆ, ಈ ಮೊತ್ತದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಅಂಜನಾ ಶಾಂತವೀರ್ ಪಿಸಿಆರ್ ಫೈಲ್ ‌ಮಾಡಿದ್ದರು. ಇದಾದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಚಿಂಚನಸೂರು ಅವರಿಗೆ ಅನೇಕ ಬಾರಿ ನೋಟಿಸ್ ನೀಡಿತ್ತು.

For All Latest Updates

TAGGED:

ABOUT THE AUTHOR

...view details