ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಆತಂಕ ಮೂಡಿಸುತ್ತಿದೆ ಹೆಚ್1ಎನ್1, ಡೆಂಗ್ಯೂ ಪ್ರಕರಣಗಳ ಸಂಖ್ಯೆ! - undefined

ಸದಾ ತಂಪಗಿರೋ ಉದ್ಯಾನ ನಗರಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸತತ ಮಳೆಯಾಗುತ್ತಲೇ ಇದೆ. ಹೀಗಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಹೆಚ್ಚಾಗಿದೆ. ಈ ನಡುವೆ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ, ನಗರದಲ್ಲಿ ಈ ರೋಗಗಳ ಪ್ರಕರಣಗಳು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

ಆಯುಕ್ತ ಮಂಜುನಾಥ್ ಪ್ರಸಾದ್

By

Published : May 26, 2019, 3:19 PM IST

ಬೆಂಗಳೂರು:ಸಿಲಿಕಾನ್‌ ಸಿಟಿಯಲ್ಲಿ ಆಗಾಗ‌ ಮಳೆಯಾಗುತ್ತಿದೆ. ಆದರೆ ಆ ಮಳೆ ನೀರು ಸರಾಗವಾಗಿ ಹರೆಯದೆ ಅಲ್ಲಲ್ಲೇ ನಿಂತು, ಈಗ ಸಾಂಕ್ರಾಮಿಕ ‌ರೋಗ‌ ಹರಡುವುದಕ್ಕೆ ಕಾರಣವಾಗುತ್ತಿದೆ.

ನಗರದಲ್ಲಿ ಹೆಚ್1‌ ಎನ್1 ಪ್ರಕರಣ ಸಾವಿರಕ್ಕೆ‌ ಏರಿಕೆ ಆಗಿದ್ದರೆ, ಡೆಂಗ್ಯೂ‌ ಪ್ರಕರಣಗಳು ನೂರಕ್ಕೆ ಏರಿಕೆ ಆಗಿ ಈಗ ಆತಂಕ ಸೃಷ್ಟಿಸುತ್ತಿದೆ. ಅದರಲ್ಲೂ ಪಾಲಿಕೆ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗಿವೆ. ಈ ವರ್ಷದಲ್ಲಿ ಸಾಂಕ್ರಾಮಿಕ ರೋಗಗಳ ವಿವರ ನೋಡೋದಾದರೆ.

  • ಹೆಚ್1 ಎನ್1 - 1071
  • ಡೆಂಗ್ಯೂ - 383
  • ಚಿಕನ್ ಗುನ್ಯಾ - 18
  • ಟೈಫಾಯಿಡ್ ಫೀವರ್ - 41
  • ವೈರಲ್ ಹೆಪಟೈಟಿಸ್ - 13
  • ವಾಂತಿ-ಭೇದಿ - 196

ಹೆಚ್1ಎನ್1 ಪ್ರಕರಣ 1071 ಜನರಲ್ಲಿ ಕಾಣಿಸಿಕೊಂಡಿದ್ದರೆ, ಇತ್ತ ಡೆಂಗ್ಯೂ ಪ್ರಕರಣ ಕಳೆದ ವರ್ಷಕ್ಕಿಂತ ಇಳಿಕೆಯಾಗಿದ್ದು, 5 ತಿಂಗಳಲ್ಲಿ 383 ಪ್ರಕರಣ ಬೆಳಕಿಗೆ ಬಂದಿದೆ. ಉಳಿದಂತೆ ಚಿಕನ್‌ಗುನ್ಯಾ 18, ಟೈಫಾಯಿಡ್ ಫೀವರ್ -41, ವೈರಲ್ ಹೆಪಟೈಟಿಸ್-13 ಹಾಗೂ ವಾಂತಿ-ಭೇದಿ 196 ಜನರಲ್ಲಿ ಕಂಡು ಬಂದಿದೆ.

ಬೆಂಗಳೂರಲ್ಲಿ ಹೆಚ್1ಎನ್1 ಸಾವಿರಕ್ಕೆ, ಡೆಂಗ್ಯೂ ಮುನ್ನೂರಕ್ಕೆ ಏರಿಕೆ

ಇನ್ನು ನಗರದಲ್ಲಿ ಹಲವಾರು ರಸ್ತೆ ಕಾಮಗಾರಿಗಳು ನಡೆಯುತ್ತಿದೆ. ಕೆಲ ದಿನಗಳಿಂದ ಸತತ ಮಳೆಯಾಗುತ್ತಿದ್ದು, ಮಳೆ ನೀರು ಹರಿದು ಹೋಗದೆ ನಿಂತಲ್ಲೇ ನಿಲ್ಲುವಂತಾಗಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಾಗುತ್ತಿದೆ. ಜೊತೆಗೆ ಎಲ್ಲೆಂದರಲ್ಲಿ ಕಸ ಬಿಸಾಕುತ್ತಿದ್ದು, ಅದರಿಂದಲೂ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಸ್ವಚ್ಛತೆ ಇಲ್ಲದೇ ಇರುವುದೇ ಇವಕ್ಕೆಲ್ಲ ಮುಖ್ಯ ಕಾರಣವಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಈ ಸಮಸ್ಯೆ ಹೆಚ್ಚಾಗಿರುವುದರಿಂದ, ಈ ಬಗ್ಗೆ ಮಾತನಾಡಿರೋ ಆಯುಕ್ತ ಮಂಜುನಾಥ್ ಪ್ರಸಾದ್, ಯಾವ ವಾರ್ಡ್​ನಲ್ಲಿ ಅತಿ ಹೆಚ್ಚು ಪ್ರಕರಣ ಕಂಡು ಬರುತ್ತವೆಯೋ, ಅಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ‌ಪ್ರತಿ ವಾರ್ಡ್​ಗೆ ಮೂವರು ಸಿಬ್ಬಂದಿಯನ್ನ ನೇಮಿಸಲಾಗಿದೆ. ಮನೆಗಳ ಸುತ್ತಮುತ್ತ, ರಸ್ತೆ ಹಾಗೂ ನೀರು ನಿಂತಿರುವ ಜಾಗದಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಪಾಲಿಕೆಯಿಂದ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಒಟ್ಟಾರೆ, ಜನರು ಅವರವರ ಸುರಕ್ಷತೆಯಲ್ಲಿದ್ದು, ಸ್ವಚ್ಛತೆ ಕಾಪಾಡಿದರೆ ಸಾಂಕ್ರಾಮಿಕ ರೋಗ ಹರಡುವಿಕೆ ಕಡಿಮೆ ಮಾಡಬಹುದು. ಇಲ್ಲವಾದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

For All Latest Updates

TAGGED:

ABOUT THE AUTHOR

...view details