ಕರ್ನಾಟಕ

karnataka

ETV Bharat / state

'ಅಭ್ಯರ್ಥಿಯ ಚುನಾವಣಾ ವೆಚ್ಚ 70 ಲಕ್ಷ ರೂ. ಮೀರಿದ್ರೆ ಕ್ರಮ' - undefined

ಸ್ವತಂತ್ರ ಅಭ್ಯರ್ಥಿಗಳು ಆಯೋಗಕ್ಕೆ ದೂರು ನೀಡಲು ಮುಂದಾದರೆ ದೂರು ಪಡೆಯಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ನಾವು ನೀಡಿರುವ ದೂರುಗಳಿಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ - ಬೆಂಗಳೂರು ಪಕ್ಷೇತರ ಅಭ್ಯರ್ಥಿಗಳ ಆರೋಪ.

ವೆಚ್ಚ ವೀಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ

By

Published : Apr 2, 2019, 12:40 AM IST

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪರವಾಗಿ ಆರ್​ಎಸ್​ಎಸ್​, ವಿಹೆಚ್‌ಪಿ ಹಾಗೂ ಬಜರಂಗದಳದವರು ಪ್ರಚಾರ ಮಾಡುತ್ತಿದ್ದು, ಇದರ ವೆಚ್ಚವನ್ನು ಯಾರ ಖಾತೆಗೆ ಸೇರಿಸಲಾಗುತ್ತಿದೆ ಎಂದು ಸ್ವತಂತ್ರ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ವೆಚ್ಚ ವೀಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸ್ವತಂತ್ರ ಅಭ್ಯರ್ಥಿಗಳು, ಅಧಿಕಾರದಲ್ಲಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವವರ ಮೇಲೆ ನಿಗಾ ವಹಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ಸ್ವತಂತ್ರವಾಗಿ ಯಾರೂ ಪ್ರಚಾರ ಮಾಡಲು ಅವಕಾಶವಿಲ್ಲ. ಆಯೋಗದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅನುಮತಿಯ ನಂತರ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ಒಂದು ವೇಳೆ ಅಭ್ಯರ್ಥಿಯ ಅನುಮತಿಯಿಲ್ಲದೆ ಪ್ರಚಾರ ಮಾಡಿದರೆ, ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ವೆಚ್ಚ ವೀಕ್ಷಕರ ಜೊತೆ ಸಂವಾದ ಕಾರ್ಯಕ್ರಮ...

ಸ್ವತಂತ್ರ ಅಭ್ಯರ್ಥಿಗಳು ಆಯೋಗಕ್ಕೆ ದೂರು ನೀಡಲು ಮುಂದಾದರೆ ದೂರು ಪಡೆಯಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ನಾವು ನೀಡಿರುವ ದೂರುಗಳಿಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ನಾಮಪತ್ರ ಸಲ್ಲಿಸಿದ ಬಳಿಕ ಅಧಿಕಾರಿಗಳು ಯಾರೂ ಕೈಗೆ ಸಿಗುತ್ತಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ವೆಚ್ಚ ವೀಕ್ಷಕ ರಾಕೇಶ್‌ ಕುಮಾರ್‌ ಮಾತನಾಡಿ, ಪಾರದರ್ಶಕ ಚುನಾವಣೆ ಪ್ರಕ್ರಿಯೆಯನ್ನು ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಸರಿಯಾಗಿ ಸಹಾಯಕ ಚುನಾವಣಾ ಆಯೋಗ ನಿಗದಿ ಮಾಡಿರುವ ಪಟ್ಟಿಗಳಲ್ಲಿ ವೆಚ್ಚವನ್ನು ಭರ್ತಿ ಮಾಡಿ ನೀಡಬೇಕು. ಏ. 4, 8, 12, 16 ರಂದು ನಾಲ್ಕು ಹಂತದಲ್ಲಿ ವೆಚ್ಚದ ಮಾಹಿತಿ ನೀಡಿ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಹಾಯಕ ವೆಚ್ಚ ವೀಕ್ಷಕ ಡಾ.ಟಿ.ಎಸ್‌ ಹನುಮಂತೇಗೌಡ ಮಾತನಾಡಿ, ಪ್ರತಿಯೊಬ್ಬರಿಗೂ 70 ಲಕ್ಷ ರೂ. ನಿಗದಿ ಮಾಡಿದ್ದು, ಅದನ್ನಷ್ಟೇ ಖರ್ಚು ಮಾಡಬೇಕು. ಅಭ್ಯರ್ಥಿಯು ಚುನಾವಣಾ ವೆಚ್ಚ ನಿರ್ವಹಣೆಗೆ ಪ್ರತ್ಯೇಕ ಖಾತೆಯನ್ನು ತೆಗೆಯಬೇಕು. ಮೂರು ಹಂತದಲ್ಲಿ ದೈನಂದಿನ ವೆಚ್ಚದ ವರದಿ ಸಲ್ಲಿಸಬೇಕು. ಚುನಾವಣೆ ಮುಗಿದ ಬಳಿಕ ಒಂದು ತಿಂಗಳೊಳಗೆ ಪ್ರಮಾಣ ಪತ್ರದೊಂದಿಗೆ ವೆಚ್ಚದ ವಿವರದ ಮಾಹಿತಿ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

For All Latest Updates

TAGGED:

ABOUT THE AUTHOR

...view details