ಕರ್ನಾಟಕ

karnataka

ETV Bharat / state

5 ವರ್ಷದ ಹಿಂದೆ ಸಂಕಷ್ಟಕ್ಕೆ ಸಿಲುಕಿಸಿದ್ದ ಆರೋಪ: ರಾಮದಾಸ್ ವಿರುದ್ಧದ ಕೇಸ್​ ಖುಲಾಸೆ - ‘ಮಾಜಿ ಸಚಿವ ರಾಮ್​ದಾಸ್​

2014 ರ ಲೋಕಸಭಾ ಚುನಾವಣೆ ವೇಳೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರೆನ್ನಲಾದ ಮಾಜಿ ಸಚಿವ ರಾಮ್​ದಾಸ್​ ವಿರುದ್ಧದ ಪ್ರಕರಣ​ ಖುಲಾಸೆಗೊಂಡಿದೆ.

ramdas

By

Published : Apr 22, 2019, 3:10 PM IST

ಬೆಂಗಳೂರು: ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ವಿರುದ್ಧದ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯ ಖುಲಾಸೆಗೊಳಿಸಿದೆ.

ಸೋನಿಯಾ ಅವರ ತಂದೆ ಇಟಲಿ ಸೈನ್ಯದಲ್ಲಿದ್ದರು. ಈ ವೇಳೆ ಸೈನ್ಯದ ಸೀಕ್ರೆಟ್​ ಅನ್ನು ಸೋನಿಯಾ ದುರ್ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಮದಾಸ್​ ಹೇಳಿದ್ದರು ಎಂದು ಆರೋಪಿಸಲಾಗಿತ್ತು. ಹೀಗಾಗಿ ಎಲೆಕ್ಷನ್ ಸ್ಕ್ವಾಡ್ ನೀತಿ ಸಂಹಿತೆ ಉಲ್ಲಂಘನೆ ಅರೋಪದಡಿ ರಾಮದಾಸ್ ವಿರುದ್ದ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

ಇಂದು ನ್ಯಾಯಾಲಯದಲ್ಲಿ ಆ ಪ್ರಕರಣ​​ ವಿಚಾರಣೆ ನಡೆಯಿತು. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನಲೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರು ಅವರು ರಾಮದಾಸ್​ರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details