ಬೆಂಗಳೂರು:ಯಾರಿಗೆ ಎಲ್ಲಿ ಟಿಕೆಟ್ ನೀಡಬೇಕು ಎಂಬುದನ್ನು ನಾವು ಮೊದಲೇ ತೀರ್ಮಾನಿಸಬೇಕಿತ್ತು. ಬಹಳ ಲೇಟಾಗಿ ನಿರ್ಧಾರ ಕೈಗೊಂಡಿದ್ದು ಈ ಫಲಿತಾಂಶಕ್ಕೆ ಕಾರಣವಾಯಿತು ಎಂಬುದು ನನ್ನ ಅಭಿಪ್ರಾಯ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತಪ್ಪು ಅಂತ ಹೇಳಲ್ಲ. ಆದರೆ, ಉತ್ತರ ಕನ್ನಡದಲ್ಲಿ ಅವರ ಅಸ್ತಿತ್ವ ಇಲ್ಲ. ಹೀಗಾಗಿ, ಉತ್ತರ ಕನ್ನಡದಲ್ಲಿ ಜೆಡಿಎಸ್ಗೆ ಸೀಟು ನೀಡಬೇಡಿ ಎಂದು ಹೇಳಿದ್ದೆವು. ಜೆಡಿಎಸ್ಗೆ ಬಲವಿಲ್ಲದಿದ್ದರೂ ಸೀಟು ಹಂಚಿಕೆ ಮಾಡಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ನಲ್ಲಿ ನಾನು 5 ದಶಕಗಳಿಂದ ಇದ್ದೇನೆ. ಆದರೆ, ಪಕ್ಷಕ್ಕೆ ಈ ರೀತಿಯ ಹಾನಿಯಾಗಿರುವುದು ನನಗೆ ಬೇಸರ ಉಂಟುಮಾಡಿದೆ. ಖರ್ಗೆ ಸೋಲಿಲ್ಲದ ಸರದಾರ. ಆದರೂ ಸೋತಿರುವುದು ತೀರಾ ನೋವುಂಟು ಮಾಡಿದೆ. ದೇವೇಗೌಡರು ಸೋತಿದ್ದಕ್ಕೂ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.