ಬೆಂಗಳೂರು: ಪಬ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಶಬ್ಧ ಮಾಲಿನ್ಯ ಹೆಚ್ಚಳವಾದ ಹಿನ್ನೆಲೆ ನಗರ ಪೊಲೀಸರ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲೇ ರಾತ್ರೋರಾತ್ರಿ ಪಬ್ಗಳ ಮೇಲೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಜಾಸ್ತಿ ಸೌಂಡ್ ಮಾಡಿದ್ರೆ ಹುಷಾರ್... ಪಬ್ ಮಾಲೀಕರಿಗೆ ಬಿಸಿ ಮುಟ್ಟಿಸಿದ ಹೊಸ ಪೊಲೀಸ್ ಆಯುಕ್ತ...!
ಪಬ್ಗಳಲ್ಲಿ ಶಬ್ದಮಾಲಿನ್ಯ ಜಾಸ್ತಿಯಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ಚರ್ಚ್ ಸ್ಟ್ರೀಟ್‌ನಲ್ಲಿರುವ ಹಲವು ಪಬ್ಗಳ ಮೇಲೆ ದಾಳಿ ನಡೆಸಿದೆ.
ಪಬ್ಗಳಲ್ಲಿ ಶಬ್ದಮಾಲಿನ್ಯ ಜಾಸ್ತಿಯಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚರ್ಚ್ ಸ್ಟ್ರೀಟ್‌ನಲ್ಲಿರುವ ಹಲವು ಪಬ್ಗಳ ಮೇಲೆ ದಾಳಿ ಮಾಡಲಾಗಿದೆ. ಪ್ರತಿಷ್ಠಿತ ಏರಿಯಾಗಳಲ್ಲಿ ಪಬ್ ಹಾಗೂ ಬಾರ್ಗಳಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಸಂಘ- ಸಂಸ್ಥೆಗಳು ಹೈಕೋರ್ಟ್ ಗಮನಕ್ಕೆ ತಂದಿದ್ದವು. ಈ ಹಿನ್ನೆಲೆಯಲ್ಲಿ ತಡರಾತ್ರಿ ಚರ್ಚ್ ಸ್ಟ್ರೀಟ್ಗೆ ದಿಢೀರ್ ದಾಳಿ ನಡೆಸಿ, ಪಬ್, ಬಾರ್ಗಳಿಗೆ ಬಿಸಿ ಮುಟ್ಟಿಸಲಾಗಿದೆ.
ಇನ್ನು ಕೆಲ ಪಬ್ ಮಾಲೀಕರು ಪರವಾನಗಿ ಪಡೆಯದೇ ಡಿಜೆ ಹಾಗೂ ಸೌಂಡ್ ಸಿಸ್ಟಂ ಬಳಸುತ್ತಿದ್ದರು. ನಿಯಮ ಉಲ್ಲಂಘಿದ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಹೈಕೋರ್ಟ್ಗೆ ಜೂನ್ 26 ರೊಳಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ನಗರ ಪೊಲೀಸರು ವರದಿ ಸಲ್ಲಿಸಬೇಕಿದೆ.