ಕರ್ನಾಟಕ

karnataka

ಸಿಇಟಿ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್​​ನಲ್ಲಿ ಜಫಿನ್​ ಬಿಜು ಫಸ್ಟ್​​...

By

Published : May 25, 2019, 11:45 AM IST

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಬಾರಿ ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಹತ್ತು ಸ್ಥಾನಗಳಲ್ಲಿ 7 ಸ್ಥಾನ ಬೆಂಗಳೂರಿಗೆ, 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಬಳ್ಳಾರಿಗೆ ಲಭಿಸಿದೆ.

ಜಫಿನ್​ ಬಿಜು

ಬೆಂಗಳೂರು: ಈ ಬಾರಿಯ ಸಿಇಟಿ ಫಲಿತಾಂಶ ಪಕಟವಾಗಿದೆ. ಈ ಸಾಲಿನ ಫಲಿತಾಂಶವನ್ನು ಇಂದು ಪ್ರಾಧಿಕಾರದಲ್ಲಿ
ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಪ್ರಕಟಿಸಿದರು.

ಎಂಜಿನಿಯರಿಂಗ್​​ನಲ್ಲಿ ಜಫಿನ್​ ಬಿಜು ಮೊದಲ ಸ್ಥಾನ ಪಡೆದರೆ, ಚಿನ್ಮಯಿ ಎರಡನೇ ಸ್ಥಾನ ಹಾಗೂ ಸಾಯಿ ಸಾಕೇತಿಕ ಚೆಕೂರಿ ಮೂರನೇ ಸ್ಥಾನ ಪಡೆದಿದ್ದಾರೆ.

ಬಿಎಸ್​​ಸಿ ಕೃಷಿ ವಿಭಾಗದ ಸಿಇಟಿಯಲ್ಲಿ ಬೆಂಗಳೂರಿನ ಕೀರ್ತನಾ ಎಂ ಮೊದಲ, ಮಂಗಳೂರಿನ ಭುವನಾ ಬಿ ಹಾಗೂ ಹಾಸನದ ಶ್ರೀಕಾಂತ್​ ಎಂಎಲ್​ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಪಿ ಮಹೇಶ್ ಅನಂದ್ ಮೊದಲ ಸ್ಥಾನ ಪಡೆದು ಕೊಂಡಿದ್ದು, ಮೊದಲ ಹತ್ತು ಸ್ಥಾನಗಳಲ್ಲಿ 6 ಸ್ಥಾನ ಬೆಂಗಳೂರು, 2 ಮಂಗಳೂರು, 1 ಮೈಸೂರುಗೆ,1 ದಾವಣಗೆರೆಗೆ ಲಭಿಸಿದೆ.

ಬಿ ಎಸ್ಸಿ ಕೃಷಿ ವಿಭಾಗದಲ್ಲಿ ಕೀರ್ತನ ಎಂ ಅರುಣ್ ಮೊದಲ ಸ್ಥಾನ ಪಡೆದು ಕೊಂಡಿದ್ದಾರೆ. ಬೆಂಗಳೂರಿಗೆ 3 ಮಂಗಳೂರು4, ಮೈಸೂರು ಹಾಸನ, ಶಿವಮೊಗ್ಗ ತಲಾ 1 ಸ್ಥಾನ ಬಂದಿದೆ.

ಸಿಇಟಿ ಫಲಿತಾಂಶ ಪ್ರಕಟ

ಪಶು ವೈದ್ಯಕೀಯ ವಿಭಾಗದಲ್ಲಿ ಪಿ ಮಹೇಶ್ ಆನಂದ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದು, ಬೆಂಗಳೂರಿಗೆ 8 ಸ್ಥಾನ, ದಾವಣಗೆರೆ ಮೈಸೂರಿಗೆ ತಲಾ 1 ಸ್ಥಾನ ಬಂದಿದೆ.

‌ಬಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗದಲ್ಲಿ ಸಾಯಿ ಸಾಕೇತಿಕ ಚಕುರಿ ಮೊದಲ ಸ್ಥಾನ ಪಡೆದಿದ್ದು, ಮೊದಲ ಹತ್ತು ಸ್ಥಾನದಲ್ಲಿ ಬೆಂಗಳೂರಿಗೆ 7 ಮತ್ತು ಮಂಗಳೂರು, ಮೈಸೂರು, ಬಳ್ಳಾರಿ ತಲಾ ಒಂದೊಂದು ಸ್ಥಾನ‌ಸಿಕ್ಕಿದೆ.

ಏಪ್ರಿಲ್ 29,30 ಮತ್ತು ಮೇ 1 ರಂದು ರಾಜ್ಯಾದ್ಯಂತ ಒಟ್ಟು, 431 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು..‌ ಈ ವರ್ಷ 180315 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು..

ವಿದ್ಯಾರ್ಥಿಗಳು ಇಂದು ಮಧ್ಯಾಹ್ನ 1 ಗಂಟೆಗೆ ಪ್ರಾಧಿಕಾರದ ವೆಬ್ಸೈಟ್ ಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.ಫಲಿತಾಂಶಕ್ಕಾಗಿ ವೀಕ್ಷಿಸಬೇಕಾದ ವೆಬ್‌ಸೈಟ್‌ಗಳು:
http://kea.kar.nic.in
http://cet.kar.nic.in
http://karresults.nic.in

ಸಿಇಟಿ ಫಲಿತಾಂಶ ಪ್ರಕಟ...


ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ

ಎಂಜಿನಿಯರಿಂಗ್‌ ವಿಭಾಗ: ಜಫಿನ್‌ ಬಿಜು (ಪ್ರಥಮ) ಬೆಂಗಳೂರು, ಚಿನ್ಮಯಿ (ದ್ವಿತೀಯ) ಮಂಗಳೂರು, ಸಾಯಿ ಸಾಕೇತಿಕ ಚೆಕೂರಿ (ತೃತೀಯ) ಬೆಂಗಳೂರು

ನ್ಯಾಚುರೋಪತಿ ಮತ್ತು ಯೋಗ: ಮಹೇಶ್‌ ಆನಂದ್‌ (ಪ್ರಥಮ) ಬೆಂಗಳೂರು, ವಸುದೇವ್‌ (ದ್ವಿತೀಯ) ಮೈಸೂರು, ಉದಿತ್‌ ಮೋಹನ್‌ (ತೃತೀಯ) ಬೆಂಗಳೂರು

ಬಿಎಸ್‌ಸಿ ಕೃಷಿ: ಕೀರ್ತನಾ ಎಂ ಅರುಣ್‌ (ಪ್ರಥಮ) ಬೆಂಗಳೂರು, ಭುವನ್‌ ಬಿ (ದ್ವಿತೀಯ) ಮಂಗಳೂರು, ಶ್ರೀಕಾಂತ್‌ ಎಂಲ್‌ (ತೃತೀಯ) ಹಾಸನ

ಬಿಎಸ್‌ಸಿ ಪಶುವಿಜ್ಞಾನ: ಪಿ ಮಹೇಶ್‌ ಆನಂದ್‌ (ಪ್ರಥಮ) ಬೆಂಗಳೂರು, ಉದಿತ್‌ ಮೋಹನ್‌ (ದ್ವಿತೀಯ) ಬೆಂಗಳೂರು, ಸಾಯಿ ರಾಮ್‌ (ತೃತೀಯ) ಬೆಂಗಳೂರು

ಫಾರ್ಮಸಿ: ಸಾಯಿ ಸಾಕೇತಿಕಾ ಚೆಕೂರಿ (ಪ್ರಥಮ) ಬೆಂಗಳೂರು, ಜಫಿನ್‌ ಬಿಜು (ದ್ವಿತೀಯ) ಬೆಂಗಳೂರು, ಆರ್‌.ಚಿನ್ಮಯ್‌ (ತೃತೀಯ) ಮಂಗಳೂರು

ಈ ಸಲ ಸುಮಾರು 1.90 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ., ಶೇ 92ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

For All Latest Updates

TAGGED:

ABOUT THE AUTHOR

...view details