ಕರ್ನಾಟಕ

karnataka

ETV Bharat / state

ಯಾರ್‌ ನಿಲ್ಲಿಸಿದ್ರೋ, ಯಾರಿಗೆ ಸೇರಿದ್ದೋ ಏನೋ.. ಬೆಂಗಳೂರು ಏರ್​ಪೋರ್ಟ್ ರೋಡ್​ನಲ್ಲಿ ಕಾರು ಪತ್ತೆ! - undefined

ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕೊಡಿಗೇಹಳ್ಳಿ ಫ್ಲೈ ಓವರ್ ಬಳಿ ಅನುಮಾನಾಸ್ಪದವಾಗಿ ಕಾರೊಂದು ನಿಂತಿದೆ. ಸದ್ಯ ಇದು ಐಎಮ್ಎ ಮಾಲೀಕ ಮನ್ಸೂರ್​ಗೆ ಸೇರಿದ ಕಾರು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಅನುಮಾನಸ್ಪದವಾಗಿ ಕಾರು ಪತ್ತೆ

By

Published : Jun 15, 2019, 7:56 PM IST

ಬೆಂಗಳೂರು:ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಾರೊಂದು ಪತ್ತೆಯಾಗಿದೆ.

ಸದ್ಯ ಇದು ಐಎಮ್ಎ ಮಾಲೀಕ ನೂರ್‌ ಮನ್ಸೂರ್​ಗೆ ಸೇರಿದ ಕಾರು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. Ka-01 MF-9010 ನಂಬರಿನ ಸ್ಕೋಡಾ ಐಷಾರಾಮಿ ಕಾರು ಪತ್ತೆಯಾಗಿದ್ದು, ಮಿಲನ್ ಫಾರೂಕ್ ಎಂಬುವರ ಹೆಸರಲ್ಲಿ ನೋಂದಣಿಯಾಗಿದೆ.‌ ಕಳೆದ ನಾಲ್ಕೈದು ದಿನಗಳಿಂದ ಕೊಡಿಗೇಹಳ್ಳಿ ಫ್ಲೈಓವರ್ ಬಳಿ ಕಾರು ನಿಂತಿದೆ.

ಸದ್ಯ ಕಾರನ್ನ ಟೋಯಿಂಗ್ ಮಾಡಿರುವ ಹೆಬ್ಬಾಳ ಸಂಚಾರಿ ಪೊಲೀಸರು, ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್​ಗೆ ಸೇರಿದ ಕಾರ್ ಇದಾಗಿದೆಯಾ ಅಥವಾ ಬೇರೆಯವರಿಗೆ ಸೇರಿದ್ದಾ ಅನ್ನೋದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ಎಸ್ಐಟಿ ಅಧಿಕಾರಿಗಳಿಗೆ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details