ಕರ್ನಾಟಕ

karnataka

ETV Bharat / state

ಬೈಕ್​ಗೆ ಕಾರು ಡಿಕ್ಕಿ: ​ಸವಾರ ಸ್ಥಳದಲ್ಲೇ ಸಾವು - undefined

ಕಾರು, ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ನಂತರ ಕಾರಿನ ಚಾಲಕ ಪರಾರಿಯಾಗಿದ್ದಾನೆ.

ನೆಲಮಂಗಲ ಬಳಿ ಬೈಕ್​ ಕಾರು ಡಿಕ್ಕಿ

By

Published : Apr 15, 2019, 1:25 PM IST

ನೆಲಮಂಗಲ: ಹಿಂಬದಿಯಿಂದ ಬಂದ ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಎಡಹಳ್ಳಿ ಬಳಿ ನಡೆದಿದೆ.

ನೆಲಮಂಗಲ ಬಳಿ ಬೈಕ್​ ಕಾರು ಡಿಕ್ಕಿ

ವೀರಸಾಗರ ಗ್ರಾಮದ ವೀರಭದ್ರಯ್ಯ (60) ಮೃತ ದುರ್ದೈವಿ. ಬೈಕ್ ಹಿಂಬದಿಯ ಸವಾರ ಲಕ್ಷ್ಮಯ್ಯ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೆಟ್ರೋಲ್ ಹಾಕಿಸಿಕೊಂಡು ವಾಪಸ್‌ ಬರುವಾಗ ಈ ಘಟನೆ ನಡೆದಿದ್ದು, ವೀರಭದ್ರಯ್ಯ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ನೆಲಮಂಗಲ ಬಳಿ ಬೈಕ್​-ಕಾರು ಡಿಕ್ಕಿ

ರಸ್ತೆ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕೆಲಕಾಲ‌ ಟ್ರಾಫಿಕ್ ಜಾಮ್​ ಉಂಟಾಗಿತ್ತು.ಘಟನೆ ನಂತರ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details