ಬೆಂಗಳೂರು:ಕಳೆದ ಮೂರು ದಿನಗಳಿಂದ ರಮಡ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಇಂದು ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸೌಧದ ಕಡೆ ಪ್ರಯಾಣ ಬೆಳಸಿದ್ದಾರೆ.
ರಮಡ ರೆಸಾರ್ಟ್ನಿಂದ ವಿಧಾನಸೌಧದ ಕಡೆ ಪ್ರಯಾಣ ಬೆಳೆಸಿದ ಕೇಸರಿಪಡೆ... ವಿಶ್ವಾಸ ಮತಕ್ಕೆ ಪಟ್ಟು? - undefined
ಇಂದು ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸೌಧದ ಕಡೆ ಬಿಜೆಪಿ ಶಾಸಕರು ಪ್ರಯಾಣ ಬೆಳಸಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿಶ್ವಾಸಮತ ಸಾಬೀತುಪಡಿಸುವಂತೆ ಅಧಿವೇಶನದಲ್ಲಿ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.
ಬಿಜೆಪಿ ಶಾಸಕರು ತಂಗಿದ್ದ ರಮಡ ರೆಸಾರ್ಟ್ನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಶಾಸಕರ ಸಭೆಯು ಕಾರಣಾಂತರಗಳಿಂದ ರದ್ದಾಗಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಒಂದು ಬಸ್ ಹಾಗೂ ರೇಣುಕಾಚಾರ್ಯ ನೇತೃತ್ವದಲ್ಲಿ ಒಂದು ಬಸ್ ಸೇರಿ ಎರಡು ಬಸ್ಗಳಲ್ಲಿ ಬಹಳ ಲವಲವಿಕೆಯಿಂದ ಶಾಸಕರು ಹೊರಟರು. ಇನ್ನು ಕೆಲವು ಶಾಸಕರು ತಮ್ಮ ಕಾರುಗಳಲ್ಲಿ ಪ್ರಯಾಣ ಬೆಳೆಸಿದರು.
ಅಧಿವೇಶನದಲ್ಲಿ ಸಭಾಧ್ಯಕ್ಷರ ಕಾರ್ಯಾವಳಿಗೆ ಪೂರಕವಾಗಿ ಸದನದಲ್ಲಿ ಭಾಗಿಯಾಗಲು ನಿರ್ಧರಿಸಿರುವ ಬಿಜೆಪಿ ಶಾಸಕರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಕುಮಾರಸ್ವಾಮಿ ಅವರನ್ನು ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಾಗಿದ್ದು, ಸದನವು ಕುತೂಹಲ ಕೆರಳಿಸಿದೆ.