ಬೆಂಗಳೂರು:ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಶ್ರೀರಾಂಪುರ ಪೊಲೀಸರು ಬಂಧಿಸಿ, 8 ಲಕ್ಷ ರೂ. ಮೌಲ್ಯದ 16 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೈಕ್ ಕಳ್ಳರ ಬಂಧನ: 8 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನ ವಶಕ್ಕೆ - undefined
ನಾಲ್ವರು ಬೈಕ್ ಕಳ್ಳರನ್ನು ಬಂಧಿಸಿದ ಶ್ರೀರಾಂಪುರ ಪೊಲೀಸರು, ಬಂಧಿತರಿಂದ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಾಜಿನಗರದ ಯಾಸೀನ್, ಆರ್.ಟಿ.ನಗರದ ನಿಖಿಲ್ ಮತ್ತು ನಾಸೀರ್ ಹಾಗೂ ಆಂಧ್ರ ಪ್ರದೇಶದ ಆರೀಫ್ ಉಲ್ಲಾಖಾನ್ ಬಂಧಿತ ಆರೋಪಿಗಳು. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜ.1 ರಂದು ರಾಜೇಶ್ ಎಂಬುವವರು ತಮ್ಮ ಬೈಕ್ ಕಳ್ಳತನವಾಗಿರುವುದಾಗಿ ದೂರು ನೀಡಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ನಾಲ್ವರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಈಗಾಗಲೇ ರಾಜಾಜಿನಗರ, ಕಲಾಸಿಪಾಳ್ಯ, ಚಿಕ್ಕಬಳ್ಳಾಪುರ ಟೌನ್, ಜಯನಗರ, ಯಲಹಂಕ, ಶ್ರೀರಾಂಪುರದಲ್ಲಿ ಪ್ರಕರಣ ದಾಖಲಾಗಿದ್ದವು.