ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಕರಗ ಉತ್ಸವ ನಡೆಯುತ್ತಿದ್ದ ವೇಳೆ ಹುಡುಗಿಗಾಗಿ ಇಬ್ಬರು ಯುವಕರ ಮಧ್ಯೆ ಬಿಗ್ ಫೈಟ್ ನಡೆದಿದೆ. ಕುಡಿದ ಮತ್ತಿನಲ್ಲಿ ಯುವಕರು ಹುಡುಗಿಗಾಗಿ ಪರಸ್ಪರರ ಹೊಡೆದಾಡಿಕೊಂಡು ಉತ್ಸವಕ್ಕೆ ಬಂದ ಭಕ್ತರಿಗೆ ಪುಕ್ಕಟೆ ಮನರಂಜನೆ ನೀಡಿದ್ದಾರೆ.
ಹುಡುಗಿ ಚುಡಾಯಿಸ್ತೀಯಾ ಅಂದ, ಹೌದು ಏನೀವಾಗ ಎಂದು ಅವನು ಕೇಳಿದ.. ಇಬ್ಬರೂ ಹೊಡೆದಾಡಿಕೊಂಡರು.. ಆಗ ಖಾಕಿ ಪಡೆ ಎಂಟ್ರಿ.. - ಸಿಲಿಕಾನ್ ಸಿಟಿ
ಹುಡುಗಿ ಚುಡಾಯಿಸ್ತೀಯಾ ಅಂತಾ ಯುವಕನೊಬ್ಬನಿಗೆ ಮತ್ತೊಬ್ಬ ಯುವಕನಿಗೆ ಕೇಳಿದ್ದ. ಅದನ್ನ ನೀನೇನು ಕೇಳ್ತೀಯಾ ಅಂತಾ ಅದೇ ಆತ ಮರು ಪ್ರಶ್ನಿಸಿದ್ದ. ಮಾತಿಗೆ ಮಾತು ಬೆಳೀತು. ಕೊನೆಗೆ ಇಬ್ಬರೂ ನಡುರಸ್ತೆಯಲ್ಲಿ ನಡುರಾತ್ರಿ ಪರಸ್ಪರರು ಹೊಡೆದಾಡಿಕೊಂಡರು.
ಬಿಗ್ ಫೈಟ್
ಬೆಂಗಳೂರು ಹಲಸೂರು ಗೇಟ್ ಧರ್ಮರಾಯ ದೇವಸ್ಥಾನದ ಬಳಿಯ ಕರಗ ಉತ್ಸವದ ವೇಳೆ ಯುವತಿಯನ್ನು ಒಬ್ಬ ಯುವಕ ಚುಡಾಯಿಸಿದ್ದನಂತೆ. ಇದನ್ನ ನೋಡಿದ್ದ ಇನ್ನೊಬ್ಬ ಯುವಕ ಹುಡುಗಿ ಚುಡಾಯಿಸಿದ್ದವನ ಜತೆಗೆ ಜಗಳಕ್ಕಿಳಿದಿದ್ದ. ಮಾತಿಗೆ ಮಾತು ಬೆಳೆದು ಇಬ್ಬರೂ ಪರಸ್ಪರರುಹೊಡೆದಾಡಿಕೊಂಡಿದ್ದಾರೆ. ನಡುರಸ್ತೆಯಲ್ಲೇ ಇಬ್ಬರು ಯುವಕರು ಬಡಿದಾಡಿಕೊಂಡಿದ್ದನ್ನ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ತಮ್ಮ ವಶಕ್ಕೆ ಪಡೆದಿದ್ದಾರೆ. ನಡುರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದ ವಿಡಿಯೋ ಈಗ ವೈರಲಾಗಿದೆ.
Last Updated : Apr 20, 2019, 12:04 PM IST