ಕರ್ನಾಟಕ

karnataka

ETV Bharat / state

ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ... ಪೊಲೀಸ್​ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ - undefined

2019-20 ನೇ ಸಾಲಿನ ಖಾಲಿ ಇರುವ 292 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಬ್ ‌ಇನ್‌ಸ್ಪೆಕ್ಟರ್ ಹುದ್ದೆ

By

Published : Jun 7, 2019, 1:27 AM IST

ಬೆಂಗಳೂರು:ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 292 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

2019-20 ನೇ ಸಾಲಿನಲ್ಲಿ ನೇರ ನೇಮಕಾತಿ ಮೂಲಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಜೂ.6 ರಂದು ಸರ್ಕಾರ ಆದೇಶ ನೀಡಿದೆ.

ಅದರಂತೆ ಪಿಎಸ್‌ಐ (ಸಿವಿಲ್) 200, ಆರ್‌ಎಸ್‌ಐ (ಸಿಎಆರ್/ಡಿಎಆರ್) 40, ಸ್ಪೇ ಆರ್‌ಎಸ್‌ಐ (ಕೆಎಸ್‌ಆರ್‌ಪಿ) 40, ಪಿಎಸ್‌ಐ (ವೈರ್‌ಲೆಸ್) 5, ಎಸ್‌ಐ (ಕೆಎಸ್‌ಐಎಸ್‌ಎ) 5, ಡಿಎಸ್‌ಐ (ಸಿಐಡಿ) 2 ಹುದ್ದೆಗಳು ಸೇರಿ ಒಟ್ಟು 292 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ನೇಮಕಾತಿ) ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details