ಬೆಂಗಳೂರು:ಪ್ರಸಕ್ತ ಕರ್ನಾಟಕ ರಾಜಕೀಯ 'ಬೃಹನ್ನಾಟಕ' ನಿರ್ಣಾಯಕ ಹಂತ ತಲುಪುವತ್ತ ಸಾಗಿದ್ದು, ಅತೃಪ್ತ ಶಾಸಕರನ್ನು ಹೆಡೆಮುರಿ ಕಟ್ಟಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಾಂತರ ನಿಷೇಧ ಕಾಯ್ದೆ ಪ್ರಯೋಗಿಸಲು ಮುಂದಾಗಿವೆ. ಹಾಗಾದ್ರೆ, ಪಕ್ಷಾಂತರ ನಿಷೇಧ ಕಾಯ್ದೆ ಅಂದ್ರೆ ಏನು? ಯಾವಾಗ ಶುರುವಾಯ್ತು? ಕರ್ನಾಟಕ ರಾಜಕೀಯದ ಮುಂದಿನ ಗತಿ ಏನು? ಇಲ್ಲಿದೆ ಜನಸಾಮಾನ್ಯರಿಗೆ ಗೊತ್ತಿರಬೇಕಾದ ವಿಚಾರಗಳು.
ಕರ್ನಾಟಕ ರಾಜಕೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ 'ಪಕ್ಷಾಂತರ ನಿಷೇಧ ಕಾಯ್ದೆ' ಬಗ್ಗೆ ಒಂದಿಷ್ಟು ಕಿರು ಮಾಹಿತಿ ಇದು.
* ‘ಆಯಾ ರಾಮ್ ಗಯಾ ರಾಮ್’/ ಬಂದ ಪುಟ್ಟ ಹೋದ ಪುಟ್ಟ ಎಂಬುದು 1967ರಲ್ಲಿ ಹರಿಯಾಣ ಶಾಸಕ ಗಯಾ ಲಾಲ್ ಅವರು ಒಂದೇ ದಿನದಲ್ಲಿ ಮೂರು ಪಕ್ಷಗಳನ್ನು ಬದಲಾಯಿಸಿ ಕಪ್ಪೆ ಜಿಗಿತದ ಬಳಿಕ ಹುಟ್ಟಿಕೊಂಡು ವ್ಯಾಖ್ಯಾನವಿದು.
* ಪಕ್ಷಾಂತರ ನಿಷೇಧ ಕಾನೂನು ಎಂಬುದು ಚುನಾಯಿತ ಅಭ್ಯರ್ಥಿಯು ತನ್ನಿಷ್ಟದಂತೆ ಪಕ್ಷ ಬದಲಾಯಿಸುವುದನ್ನು ತಡೆಯುವ ಉದ್ದೇಶದಿಂದ ರಚಿತವಾಗಿದೆ.
* ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವಧಿಯಲ್ಲಿ 1985ರ ಜನವರಿ 30ರಂದು 'ಪಕ್ಷಾಂತರ ನಿಷೇಧ ಕಾಯಿದೆ'ಯನ್ನು ಜಾರಿಗೆ ತರಲಾಯಿತು. ಸಂವಿಧಾನದ 10ನೇ ಪರಿಚ್ಚೇಧದಲ್ಲಿ ಇದನ್ನು ಸೇರಿಸಲಾಗಿದ್ದು, ಈ ಕಾಯ್ದೆ ಉಲ್ಲಂಘಿಸುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬಹುದು.
* ಚುನಾಯಿತ ಪ್ರತಿನಿಧಿ ಪಕ್ಷಾಂತರ ಮಾಡಿದ್ದಾನಾ ಇಲ್ಲವೋ? ಎಂಬ ತೀರ್ಮಾನವನ್ನು ತೆಗೆದುಕೊಳ್ಳುವ ಅಧಿಕಾರ 'ಪಕ್ಷಾಂತರ ನಿಷೇಧ ಕಾಯ್ದೆ'ಯ ಪ್ರಕಾರ ಸಭಾಧ್ಯಕ್ಷರಿಗಿದೆ.
* ಶಾಸಕರೊಬ್ಬರು ತಮ್ಮ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿದರೆ ಅಥವಾ ಮತದಾನದ ಸಂದರ್ಭದಲ್ಲಿ ಪಕ್ಷದ ನಾಯಕತ್ವದ ನಿರ್ದೇಶನಗಳನ್ನು ಧಿಕ್ಕರಿಸಿದರೆ ಅದನ್ನು ದೋಷಪೂರಿತರೆಂದು ಪರಿಗಣಿಸಲಾಗುತ್ತದೆ.
ಶಾಸಕರನ್ನು ಯಾವಾಗ ಅನರ್ಹಗೊಳಿಸಬಹುದು?
* ರಾಜಕೀಯ ಪಕ್ಷದಿಂದ ಆಯ್ಕೆಯಾಗುವ ಯಾವುದೇ ಶಾಸಕ/ ಸಂಸದನು ತಾನು ಆಯ್ಕೆಯಾದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ, ಇನ್ನೊಂದು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾದರೇ ಅದು ಪಕ್ಷಾಂತರ. ಅಂಥವರನ್ನು ಸ್ಪೀಕರ್ ವಿಚಾರಣೆ ನಡೆಸಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು.
* ಅಧಿವೇಶನದ ಸಂದರ್ಭದಲ್ಲಿ ಮಸೂದೆಗಳ ಮೇಲೆ ನಡೆಯುವ ಮತದಾನಕ್ಕೆ ಸರ್ಕಾರದ ಪರ ಸಮ್ಮತಿ ಸೂಚಿಸುವಂತೆ ರಾಜಕೀಯ ಪಕ್ಷವೊಂದು ತನ್ನ ಶಾಸಕ/ಸಂಸದರಿಗೆ ಲಿಖಿತ ಸೂಚನೆ (ವಿಪ್) ಜಾರಿಗೊಳಿಸಿದ ಬಳಿಕವೂ, ಅದನ್ನು ಉಲ್ಲಂಘನೆ ಮಾಡುವ ಹಾಗೂ ಮತದಾನದಿಂದ ದೂರ ಉಳಿಯುವವರನ್ನು ಪಕ್ಷಾಂತರಿ ಎಂದು ಪರಿಗಣಿಸಿ ಅಂತವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು.
ಹಾಗಾದ್ರೆ, ಯಾವುದು ಪಕ್ಷಾಂತರವಲ್ಲ?