ಬೆಂಗಳೂರು: ಏರ್ ಶೋದ ತಾಲೀಮಿನ ವೇಳೆ ನಡೆದ ದುರಂತದ ವೇಳೆ ತಮಗೆ ಸಹಾಯ ಮಾಡಿದ ಸ್ಥಳೀಯ ಯುವಕರನ್ನು ಆಸ್ಪತ್ರೆಗೆ ಕರೆಯಿಸಿ ಗಾಯಾಳು ಪೈಲಟ್ ಧನ್ಯವಾದ ಅರ್ಪಿಸಿದ್ದಾರೆ.
ಏರ್ಕ್ರಾಫ್ಟ್ ದುರಂತ: ರಕ್ಷಿಸಿ ಧೈರ್ಯ ತುಂಬಿದ ಯುವಕರನ್ನು ಕರೆಸಿ ಧನ್ಯವಾದ ಅರ್ಪಿಸಿದ ಪೈಲಟ್ - bng-pilot
ಏರ್ ಶೋ ತಾಲೀಮಿನ ವೇಳೆ ನಡೆದ ದುರಂತದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪೈಲಟ್ರನ್ನು ರಕ್ಷಿಸಿದ ಯುವಕರು... ಆಸ್ಪತ್ರೆಗೆ ಕರೆಸಿ ಯುವಕರಿಗೆ ಧನ್ಯವಾದ ತಿಳಿಸಿದ ಪೈಲಟ್
ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಫೆ.19 ರಂದು ಯಲಹಂಕ ವಾಯುನೆಲೆ ಪ್ರದೇಶದಲ್ಲಿ ಆಗಸದಲ್ಲಿ ಹಾರಾಡುತ್ತಿದ್ದ ಸೂರ್ಯಕಿರಣ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ದುರಂತ ಸಂಭವಿಸಿತ್ತು. ಈ ವೇಳೆ ಓರ್ವ ಪೈಲಟ್ ಮೃತಪಟ್ಟಿದ್ದರು. ಮತ್ತೊಬ್ಬ ಪೈಲಟ್ ವಿಜಯ್ ಕೆಳಗೆ ಬಿದ್ದು ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ಆಗ ಸ್ಥಳಿಯ ಯುವಕ ಚೇತನ್ ಮತ್ತು ಸ್ನೇಹಿತರು ಪೈಲಟ್ಗೆ ನೀರು ಕುಡಿಸಿ ಆರೈಕೆ ಮಾಡಿದ್ದರು.
ಸದ್ಯ ಚೇತರಿಸಿಕೊಳ್ಳುತ್ತಿರುವ ಪೈಲಟ್ ವಿಜಯ್ ಹಾಗೂ ಅವರ ತಂದೆ ರಕ್ಷಿಸಿದ ಯುವಕರ ಬಗ್ಗೆ ಮಾಹಿತಿ ಪಡೆದು ಅವರನ್ನು ಕಮಾಂಡ್ ಆಸ್ಪತ್ರೆಗೆ ಕರೆಸಿ ಕೃತಜ್ಞತೆ ಸಲ್ಲಿಸಿದರು.
TAGGED:
bng-pilot