ಕರ್ನಾಟಕ

karnataka

ETV Bharat / state

ಏರೋ ಇಂಡಿಯಾ ಅವಘಡ: ಪೈಲೆಟ್​ಗೆ ಧೈರ್ಯ ಹೇಳಿದ ವಿದ್ಯಾರ್ಥಿಗಳಿಗೆ ಎಲ್ಲೆಡೆ ಪ್ರಶಂಸೆ - kannada news

2019ರ ಫೆಬ್ರವರಿ 19 ರಂದು ಏರ್ ಶೋಗೆ ತಾಲೀಮು ನಡೆಸುತ್ತಿದ್ದ ಎರಡು ಸೂರ್ಯ ಕಿರಣ್ ಲಘು ಯುದ್ಧ ವಿಮಾನಗಳು ಒಂದಕ್ಕೊಂದು ಅಚನಕ್ಕಾಗಿ ತಾಕಿ ಪತನವಾಗಿದ್ದವು. ಈ ಸಂದರ್ಭದಲ್ಲಿ ಪೈಲೆಟ್​ಗೆ ಗಾಯಗಳಾಗಿದ್ದು, ಅವರನ್ನ ಉಪಚಾರ ಮಾಡಿದ್ದು ಮಾತ್ರ ವಿದ್ಯಾರ್ಥಿಗಳು.

ಸೂರ್ಯ ಕಿರಣ್ ಅವಗಡದಲ್ಲಿ ಪೈಲೆಟ್​ಗೆ ಸಹಾಯ ಮಾಡಿದ ವಿದ್ಯಾರ್ಥಿಗಳು

By

Published : Mar 21, 2019, 12:23 PM IST

ಬೆಂಗಳೂರು : 2019ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಪ್ರದರ್ಶನ ಪ್ರಾರಂಭದ ಒಂದು ದಿನ ಮುನ್ನ ದೊಡ್ಡ ಅವಘಡವೊಂದು ಸಂಭವಿಸಿತ್ತು. ಆ ಏರ್​ಕ್ರಾಶ್​ನಲ್ಲಿ ಒಬ್ಬ ಪೈಲೆಟ್ ಸಾವನ್ನಪ್ಪಿದರೆ ಇನ್ನಿಬ್ಬರು ಆಸ್ಪತ್ರೆ ಪಾಲಾಗಿದ್ದರು. ಇಂತಹ ಸಂದರ್ಭದಲ್ಲಿ ಪೈಲೆಟ್​ಗೆ ಧೈರ್ಯ ತುಂಬಿದ್ದು ಮಾತ್ರ ವಿದ್ಯಾರ್ಥಿಗಳು.

ಹೌದು, ಫೆಬ್ರವರಿ 19 ರಂದು ಏರ್ ಶೋಗೆ ತಾಲೀಮು ನಡೆಸುತ್ತಿದ್ದ ಎರಡು ಸೂರ್ಯ ಕಿರಣ್ ಯುದ್ಧ ವಿಮಾನಗಳು ಒಂದಕ್ಕೊಂದು ತಾಕಿ ಪತನವಾಗಿದ್ದವು. ಒಂದು ವಿಮಾನ ಸ್ಫೋಟಗೊಂಡು ಪೈಲೆಟ್ ಸಾಹಿಲ್ ಗಾಂಧಿ ಸಾವನ್ನಪ್ಪಿದರು. ಮತ್ತೊಂದು ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಪ್ಯಾರಾಚೂಟ್​​ನಿಂದ ಹಾರಿ ಸಾವಿನ ದವಡೆಯಿಂದ ಪಾರಾಗಿದ್ದರು. ಈ ಪೈಲೆಟ್ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರ ಕಾಲೇಜ್​ ವಿದ್ಯಾರ್ಥಿಗಳು.

ಸೂರ್ಯ ಕಿರಣ್ ಅವಗಡದಲ್ಲಿ ಪೈಲೆಟ್​ಗೆ ಸಹಾಯ ಮಾಡಿದ ವಿದ್ಯಾರ್ಥಿಗಳು

‌ನಿಟ್ಟೆ ಮೀನಾಕ್ಷಿ ಕಾಲೇಜ್ ಪಕ್ಕದಲ್ಲೇ ಸೂರ್ಯ ಕಿರಣ ಲಘು ವಿಮಾನಗಳೆರಡರ ನಡುವೆ ಅಪಘಾತ ಸಂಭವಿಸಿತು. ಈ ನಡುವೆ ಒಬ್ಬ ಪೈಲೆಟ್​ ಪ್ಯಾರಾಚೂಟ್ ಮೂಲಕ ಕೆಳಗೆ ಜಿಗಿದಿದ್ದಾರೆ. ಪೈಲೆಟ್​ ಅಪಘಾತ ನಡೆದ ಸ್ಥಳದಲ್ಲೇ ಬಿದ್ದದ್ದು, ಸಾಕಷ್ಟು ಗಾಯಗಳಾಗಿದ್ದವು. ಇದನ್ನು ಕಣ್ಣಾರೆ ಕಂಡ ವಿದ್ಯಾರ್ಥಿಗಳು ಸ್ಥಳಕ್ಕೆ ಹೋಗಿ ಪೈಲೆಟ್​​ಗೆ ಸಹಾಯ ಮಾಡಿದ್ದಲ್ಲದೇ ಪ್ಯಾರಾಚೂಟ್ ಸೇರಿದಂತೆ ಅವರ ಮೇಲಿದ್ದ ಭಾರವಾದ ವಸ್ತುಗಳನ್ನು ತೆಗೆದು ನೀರು ಕುಡಿಸಿ ಆರೈಕೆ ಮಾಡಿ, ಕಮಾಂಡರ್ ಬರುವ ತನಕ ಪೈಲೆಟ್​​ಗೆ ಉಪಚಾರ ಮಾಡಿದ್ರು.

ವಿದ್ಯಾರ್ಥಿಗಳು ಮಾಡಿದ ಆ ಒಳ್ಳೆಯ ಕೆಲಸಕ್ಕೆ ಏರ್ ಫೋರ್ಸ್ ಸೇರಿದಂತೆ ಇಡೀ ಕಾಲೇಜು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದಲ್ಲದೆ ಇಂತಹ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಈ ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ನಾವು ಇದೇ ಕೆಲಸ ಮಾಡುತ್ತಿದ್ದೆವು ಎಂಬುದು ಆ ಇಬ್ಬರು ವಿದ್ಯಾರ್ಥಿಗಳ ಮನಸಿನ‌ ಮಾತು.


ABOUT THE AUTHOR

...view details