ಬೆಂಗಳೂರು: ಸ್ಯಾಂಡಲ್ವುಡ್ ನಟ ಯಶ್ ಬಾಡಿಗೆ ಮನೆ ಡ್ಯಾಮೇಜ್ ವಿವಾದ ಸಂಬಂಧ ಯಶ್ ತಾಯಿ ಪುಷ್ಪಾ ಅವರ ವಿರುದ್ಧ ಮನೆ ಮಾಲೀಕರಾದ ಮುನಿಪ್ರಸಾದ್ ಹಾಗೂ ವನಜಾ, ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಡಿಗೆ ಮನೆ ವಸ್ತುಗಳ ಡ್ಯಾಮೇಜ್: ಯಶ್ ತಾಯಿ ವಿರುದ್ಧ ದೂರು - undefined
ನಟ ಯಶ್ ಬಾಡಿಗೆ ಮನೆ ಡ್ಯಾಮೇಜ್ ವಿವಾದ ಸಂಬಂಧ, ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳು ಧ್ವಂಸ ಮಾಡಿದ್ದು, ಇನ್ನಷ್ಟು ವಸ್ತುಗಳು ಕಳ್ಳತನವಾಗಿದೆ ಎಂದು ಮನೆ ಮಾಲೀಕರು ಯಶ್ ತಾಯಿ ವಿರುದ್ಧ ದೂರು ನೀಡಿದ್ದಾರೆ.
![ಬಾಡಿಗೆ ಮನೆ ವಸ್ತುಗಳ ಡ್ಯಾಮೇಜ್: ಯಶ್ ತಾಯಿ ವಿರುದ್ಧ ದೂರು](https://etvbharatimages.akamaized.net/etvbharat/prod-images/768-512-3510112-thumbnail-3x2-megha.jpg)
ನಟ ಯಶ್
ಹೈಕೋರ್ಟ್ ಆದೇಶದ ಪ್ರಕಾರ 9 ವರ್ಷಗಳಿಂದ ಉಳಿದುಕೊಂಡಿದ್ದ ಬಾಡಿಗೆ ಮನೆ ಖಾಲಿ ಮಾಡಿದ್ದರು. ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳು ಧ್ವಂಸ ಮಾಡಿದ್ದು, ಇನ್ನಷ್ಟು ವಸ್ತುಗಳು ಕಳ್ಳತನವಾಗಿದೆ ಎಂದು ಗಂಭೀರವಾಗಿ ಆರೋಪಿಸಿದ ಮುನಿಪ್ರಸಾದ್ ಹಾಗೂ ವನಜಾ ದಂಪತಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಿರಿನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.