ಕರ್ನಾಟಕ

karnataka

ETV Bharat / state

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಅಧಿಕಾರ ಸ್ವೀಕಾರ - undefined

ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ ಬಳಿಕ ಕರ್ನಾಟಕ ಹೈಕೋಟ್೯ ಮುಖ್ಯ ನ್ಯಾಯಮೂರ್ತಿ ಹುದ್ದೆ ತೆರವಾಗಿತ್ತು. ಬಳಿಕ ರಾಷ್ಟ್ರಪತಿಗಳು ನೂತನ ನ್ಯಾಯಮೂರ್ತಿ ಅವರನ್ನು ನೇಮಿಸಿದ್ದು, ಇಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಪ್ರಮಾಣವಚನ ಸ್ವೀಕಾರ

By

Published : May 10, 2019, 1:48 PM IST

Updated : May 10, 2019, 5:00 PM IST

ಬೆಂಗಳೂರು:ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ ಅಭಯ್ ಶ್ರೀನಿವಾಸ್ ಓಕಾ ಪ್ರಮಾಣವಚನ ಸ್ವೀಕಾರ ಮಾಡಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಪ್ರಮಾಣ ವಚನ ಬೋಧನೆ ಮಾಡಿದರು.

1983ರಲ್ಲಿ ಥಾಣೆ ಜಿಲ್ಲಾ ನ್ಯಾಯಾಲಯದಿಂದ ಎ ಎಸ್ ಓಕಾ ವೃತ್ತಿ ಶುರು ಮಾಡಿದರು. ಆಗಸ್ಟ್ 2003ರಲ್ಲಿ ಬಾಂಬೆ ಹೈಕೋರ್ಟ್​ಗೆ ಅಡಿಷನಲ್ ಜಡ್ಜ್ ಆಗಿ ನೇಮಕವಾಗಿ, ನವೆಂಬರ್ 2005ರಲ್ಲಿ ಪೂರ್ಣಪ್ರಮಾಣದ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ‌ಈ ಹಿಂದೆ ಸಿಜೆ ಆಗಿ ದಿನೇಶ್​ ಮಹೇಶ್ವರಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮಹೇಶ್ವರಿ, ಸುಪ್ರೀಂಕೋರ್ಟ್​ನ ಜಡ್ಜ್ ಆಗಿ ಪದೋನ್ನತಿ ಹೊಂದಿದ್ದರು. ಸದ್ಯ ಹೈಕೋರ್ಟ್​ಗೆ ಹೊಸ ಸಿಜೆ ಆಗಿ ಅಭಯ್ ಶ್ರೀನಿವಾಸ್ ಓಕಾ ನೇಮಕವಾಗಿದ್ದಾರೆ.

ಹೈಕೋರ್ಟ್ ಮುಖ್ಯ ನ್ಯಾ. ಎ ಎಸ್ ಓಕಾ ಪ್ರಮಾಣವಚನ ಸ್ವೀಕಾರ

ಇನ್ನು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಗಳು, ಹಿರಿಯ ವಕೀಲರು, ರಾಜ್ಯಪೊಲಿಸ್ ಮಹಾನಿರ್ದೇಶಕಿ ನೀಲಮಣಿರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Last Updated : May 10, 2019, 5:00 PM IST

For All Latest Updates

TAGGED:

ABOUT THE AUTHOR

...view details