ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರಕ್ಕೆ ಬಿಗ್​ ಶಾಕ್​.. ಕಾಂಗ್ರೆಸ್ 8 ಮತ್ತು ಜೆಡಿಎಸ್​ನ 3 ಶಾಸಕರು ರಾಜೀನಾಮೆ!

11 ಶಾಸಕರು ರಾಜೀನಾಮೆ ನೀಡುವುದಕ್ಕಿಂತ ಮೊದಲು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್​ ಸಿಂಗ್​ ರಾಜೀನಾಮೆ ಸಲ್ಲಿಸಿದ್ದರು. ಅವರೂ ಸೇರಿದರೆ 12 ಶಾಸಕರು ರಾಜೀನಾಮೆ ಸಲ್ಲಿಸಿದಂತಾಗಿದೆ. ಇದರಿಂದ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದಂತಾಗಿದ್ದು, ಕಾಂಗ್ರೆಸ್​ ಮತ್ತು ಜೆಡಿಎಸ್​ ಹಿರಿಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

By

Published : Jul 6, 2019, 3:50 PM IST

ಶಾಸಕರ ಸಭೆ

ಬೆಂಗಳೂರು:ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್​ನ ಮೂವರು ಹಾಗೂ ಕಾಂಗ್ರೆಸ್​ನ 8 ಜನ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ತಮ್ಮ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್​ ಕೊಟ್ಟಿದ್ದಾರೆ.

ಜೆಡಿಎಸ್​ನ ಮೂವರು ರಾಜೀನಾಮೆ: ಜೆಡಿಎಸ್​ನ ಶಾಸಕರಾದ ಹೆಚ್.ವಿಶ್ವನಾಥ್ (ಹುಣಸೂರು), ನಾರಾಯಣಗೌಡ (ಕೆ.ಆರ್.ಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್​ನ 8 ಮಂದಿ ರಾಜೀನಾಮೆ: ಕಾಂಗ್ರೆಸ್​ನ ಶಾಸಕರಾದ ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್), ರಮೇಶ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ಪ್ರತಾಪ್ ಗೌಡ (ಮಸ್ಕಿ), ಬಿ.ಸಿ ಪಾಟೀಲ್ (ಹಿರೇಕೇರೂರು) , ಶಿವರಾಮ್ ಹೆಬ್ಬಾರ್ (ಯಲ್ಲಾಪುರ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಬೈರತಿ ಬಸವರಾಜ್ (ಕೆ.ಆರ್.ಪುರಂ) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡದ ಶಾಸಕ ಮುನಿರತ್ನ

ಅತೃಪ್ತರ ಜತೆ ಶಾಸಕ ಮುನಿರತ್ನ (ರಾಜರಾಜೇಶ್ವರಿ ಕ್ಷೇತ್ರ) ತೆರಳಿದ್ದರು. ಆದರೆ, ರಾಜೀನಾಮೆ‌ ನೀಡಿರುವುದಿಲ್ಲ. ರಾಮಲಿಂಗಾರೆಡ್ಡಿ ಅವರ ಪುತ್ರಿ, ಶಾಸಕಿ ಸೌಮ್ಯಾರೆಡ್ಡಿ (ಜಯನಗರ) ಸಹ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details