ಕರ್ನಾಟಕ

karnataka

ETV Bharat / state

ಎತ್ತುಗಳನ್ನು ತೊಳೆಯಲು ನೀರಿಗಿಳಿದ ಯುವಕ ಕೆರೆಯಲ್ಲಿ ಮುಳಗಿ ಸಾವು - Death by drowning in a lake

ಯಲ್ಲದಗುಂಡಿ ತಾಂಡಾದ ದೋಶನ್ ಅಶೋಕ ಚವ್ಹಾಣ (18) ಮೃತಪಟ್ಟ ಯುವಕ. ಎತ್ತುಗಳ ಮೈ ತೊಳೆಯಲು ಕೆರೆ ನೀರಿನಲ್ಲಿ ಇಳಿದ ಈತ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.

ಯುವಕ ಕೆರೆಯಲ್ಲಿ ಮುಳಗಿ ಸಾವು
ಯುವಕ ಕೆರೆಯಲ್ಲಿ ಮುಳಗಿ ಸಾವು

By

Published : Apr 19, 2020, 8:04 AM IST

ಬಸವಕಲ್ಯಾಣ:ಎತ್ತುಗಳ ಮೈತೊಳೆಯಲೆಂದು ಕೆರೆ ನೀರಿಗೆ ಇಳಿದ ಯುವಕನ್ನೊಬ್ಬ ಕೆಸರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ಸೈದಾಪೂರ ಸಮೀಪದ ಕೆರೆಯಲ್ಲಿ ಶನಿವಾರ ಜರುಗಿದೆ.

ಯಲ್ಲದಗುಂಡಿ ತಾಂಡಾದ ದೋಶನ್ ಅಶೋಕ ಚವ್ಹಾಣ (18) ಮೃತ ಯುವಕ. ಎತ್ತುಗಳ ಮೈ ತೊಳೆಯಲು ಕೆರೆ ನೀರಿನಲ್ಲಿ ಇಳಿದ ಈತ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಪ್ರವೀಣ, ಸಿಬ್ಬಂದಿ ರುದ್ರಮುನಿ ಸ್ವಾಮಿ, ಮಲ್ಲಿಕಾರ್ಜುನ, ಶ್ರೀಕಾಂತ, ಶಂಬುಲಿಂಗ ಶಿವರಾಜ ಅವರು ಸ್ಥಳೀಯರ ಸಹಾಯದಿಂದ ಯುವಕನ ಶವ ಹೊರ ತೆಗೆದಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಹಸೀಲ್ದಾರ ಸಾವಿತ್ರಿ ಸಲಗರ್ ಹಾಗೂ ಪಿಎಸ್‌ಐ ಅರುಣಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details