ಬಸವಕಲ್ಯಾಣ:ಮಾರಕ ಕೊರೊನಾ ಸೋಂಕಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷೇತ್ರದ ಶಾಸಕ ಬಿ. ನಾರಾಯಣರಾವ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ನಗರ ಸೇರಿದಂತೆ ವಿವಿಧೆಡೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
ಶಾಸಕ ನಾರಾಯಣರಾವ ಆದಷ್ಟು ಬೇಗ ಗುಣಮುಖರಾಗಲಿ ಎಂದು ತ್ರಿಪುರಾಂತನ ಜೈಭವಾನಿ ಮಂದಿರದಲ್ಲಿ ಪೂಜೆ, ಅಭಿಷೇಕ, ಪ್ರಾರ್ಥನೆ ಜರುಗಿತು. ಜೈಭವಾನಿ ಮಂದಿರ ಸುಧಾರಣ ಸಮಿತಿ ಅಧ್ಯಕ್ಷ ಗೋವಿಂದ ಚಾಮಾಲ್ಲೆ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬೊಕ್ಕೆ, ರವಿ ಬೋರೊಳೆ, ರಾಮ ಜಾಧವ, ಮಾಜಿ ಸದಸ್ಯ ನಾಗನಾಥ ಚಾಮಾಲ್ಲೆ, ವೀರಶೈವ ಮಹಾ ಸಭೆ ತಾಲೂಕು ಅಧ್ಯಕ್ಷ ಶಶಿಕಾಂತ ದುರ್ಗೆ, ಮುಖಂಡರಾದ ರಾಮಣ್ಣ ಮಂಠಾಳೆ, ರಾಜಕುಮಾರ ಇರಲೆ, ದಿಗಂಬರ ಬೊಕ್ಕೆ ಇತರರು ಭಾಗವಹಿಸಿದ್ದರು.
ನಗರದ ವಿಶ್ವ ಡೆವಲಪರ್ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾರಾಯಣರಾವ ಅವರು ಬೇಗ ಗುಣಮುಖರಾಗಿ ಜನ ಸೇವೆಗೆ ಮರಳಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಪೂಜ್ಯ ಧಮ್ಮನಾಗ ಭಂತೆ, ಅಕ್ಬರ್ ಮೌಲಾನಾ, ವಿಶ್ವ ಡೆವಲರ್ಸ್ ಅಧ್ಯಕ್ಷ ಬಸವರಾಜ ಸ್ವಾಮಿ, ಬಾಲಾಜಿ ಚಂಡಕಾಪೂರೆ, ತಹಸೀನಲಿ ಜಮಾದಾರ, ಅಸ್ಲಮ್ ಜನಾಬ, ವಿಶ್ವನಾಥ ಗುರ್ಜರ ಉಪಸ್ಥಿತರಿದ್ದರು. ಹುಲಸೂರ ರಸ್ತೆ ವಾರ್ಡ್ ಸಂಖ್ಯೆ 5 ರ ರಕ್ಷಾ ಕಾಲನಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.