ಕರ್ನಾಟಕ

karnataka

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಸಿದ ಮಹಿಳಾ ಸಂಘಟನೆಗಳು

By

Published : Jan 8, 2020, 9:37 PM IST

ಪೌರತ್ವ (ತಿದ್ದುಪಡಿ) ವಿರೋಧಿಸಿ ವಿವಿಧ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಜರುಗಿತು.

Women's organisation made rally
ಪ್ರತಿಭಟನಾ ರ‍್ಯಾಲಿ ನಡೆಸಿದ ಮಹಿಳಾ ಸಂಘಟನೆಗಳು

ಬಸವಕಲ್ಯಾಣ(ಬೀದರ್‌): ಪೌರತ್ವ ಕಾಯ್ದೆ ವಿರೋಧಿಸಿ ನಗರದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಜರುಗಿತು.

ಇಲ್ಲಿಯ ಕೋಟೆ ಬಳಿ ಜಮಾಯಿಸಿದ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಆರ್‌ಪಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಸಿದ ಮಹಿಳಾ ಸಂಘಟನೆಗಳು

ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡ ಜನವಾದಿ ಮಹಿಳಾ ಸಂಘಟನೆ ಮುಖ್ಯಸ್ಥೆ ಕೆ. ನೀಲಾ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಸಬ್​ ಕಾ ಸಾಥ್, ಸಬ್ ಕಾ ವಿಕಾಸ್​​ ಎಂದು ಹೇಳಿಕೊಂಡು ಜನ ವಿರೋಧಿ ನೀತಿ ಜಾರಿಗೆ ತರುತ್ತಿದೆ. ಕೋಮು ಸೌಹಾರ್ಧತೆಯಿಂದ ಬಾಳುತ್ತಿರುವ ದೇಶದ ಜನರನ್ನು ಒಡೆಯಲು ಮೋದಿ, ಅಮಿತ್ ಶಾ ಅವರಿಂದ ಸಾಧ್ಯವಿಲ್ಲ. ಆರ್‌ಎಸ್‌ಎಸ್ ಎನ್ನುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘವಲ್ಲ. ಅದೊಂದು ರಾಷ್ಟ್ರೀಯ ಸರ್ವನಾಶ ಸಮಿತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಾಮಾಜಿಕ ಕಾರ್ಯಕರ್ತೆ ಖಾಲಿದಾ ಬೇಗಂ ಮಾತನಾಡಿ, ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಅಸ್ಥಿತ್ವಕ್ಕೆ ನಡೆಯುತ್ತಿರುವ ಹೋರಾಟವಾಗಿದೆ. ಇದು ಹಿಂದೂ-ಮುಸ್ಲಿಂರ ನಡುವಿನ ಹೋರಾಟವಲ್ಲ. ಬಿಜೆಪಿ ವಿರುದ್ಧದ ಹೋರಾಟವಾಗಿದೆ. ಎನ್‌ಆರ್‌ಸಿ, ಸಿಎಎ ವಾಪಾಸ್ ಪಡೆಯುವವರೆಗೆ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದರು.

ಪ್ರತಿಭಟನಾ ರ‍್ಯಾಲಿಯಲ್ಲಿ ತಾ.ಪಂ. ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ್​, ಪ್ರಮುಖರಾದ ಅಂಜುಮ ಅನ್ವರ ಭೋಸ್ಗೆ, ಶಹಿದಾ ಬೇಗಂ, ಶರವತ್, ರುಕ್ಸಾನ ಪರ್ವೀನ್, ಶಹಾಜಹಾನ್ ಮನಿಯಾರ್, ಶಹಾಜಹಾನ್ ಶೇಕ್ ತನ್ವೀರ್ ಅಹ್ಮದ್, ಜವೀರಯಾ ಫರ್ಹಾನ್, ಫಾತಿಮಾ ಅಬ್ದುಲ್ ಗಫಾರ್, ನಾಜೀನ ಸಾಬಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ABOUT THE AUTHOR

...view details