ಬೀದರ್:ಸತತ ಎರಡು ತಿಂಗಳಿನಿಂದ ಕುಡಿಯಲು ಹನಿ ನೀರಿಗಾಗಿ ಪರದಾಡುತ್ತಿದ್ದ ಮಹಿಳೆಯರು ಇಂದು ಪಟ್ಟಣ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ್ದಾರೆ.
ಕುಡಿಯೋಕೆ ನೀರಿಲ್ಲವೆಂದು ಪಟ್ಟಣ ಪಂಚಾಯತ್ ಕಚೇರಿಗೆ ಬೀಗ ಹಾಕಿದ ಮಹಿಳೆಯರು.. - undefined
ಜಿಲ್ಲೆಯ ಔರಾದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಜನರು ಹನಿ ನೀರಿಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.ಬಡವರು ಮೂರ್ನಲ್ಕು ಕಿಲೋ ಮೀಟರ್ ನಡೆದು ನೀರು ತರುವಂಥ ಪರಿಸ್ಥತಿ ಇದೆ. ಇದರಿಂದ ಬೇಸತ್ತ ಮಹಿಳೆಯರು ಇಂದು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಔರಾದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಜನರು ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಣ ಉಳ್ಳವರು ಟ್ಯಾಂಕರ್ ಮೂಲಕ ನೀರು ತಂದರೆ, ಬಡವರು ಮೂರ್ನಾಲ್ಕು ಕಿಲೋ ಮೀಟರ್ ನಡೆದು ನೀರು ತರುವ ಪರಿಸ್ಥಿತಿ ಇದೆ. ಇದರಿಂದ ಬೇಸತ್ತ ಮಹಿಳೆಯರು ಇಂದು ಪ್ರತಿಭಟನೆ ನಡೆಸಿದರು.
ಪಟ್ಟಣ ಪಂಚಾಯತ್ನ ಅಧಿಕಾರಿಗಳು ಸಾರ್ವಜನಿಕ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನೆ ಮಾಡದೆ ಇರುವುದಕ್ಕೆ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ಎಂದು ಆರೋಪಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ತಹಶೀಲ್ದಾರ್ ಚಂದ್ರಶೇಖರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರು, ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಪರಿಸ್ಥಿತಿ ಕೈ ಮೀರುವ ಹಂತದಲ್ಲಿ ಔರಾದ್ ಪೊಲೀಸ್ ಠಾಣೆ ಪಿಎಸ್ಐ ನಾನಾಗೌಡ ಪಾಟೀಲ್ ಸ್ಥಳದಲ್ಲೇ ಎಚ್ಚರಿಕೆ ಕೊಟ್ಟು ಪ್ರತಿಭಟನೆ ಶಮನಗೊಳಿಸಿದರು.