ಕರ್ನಾಟಕ

karnataka

ETV Bharat / state

ಬ್ರಿಮ್ಸ್​​ನಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವು: ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ - ಬ್ರಿಮ್ಸ್​​ನಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವು

ಬೀದರ್​​ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಮೃತಳ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಹೆರಿಗೆ ಬಳಿಕ ಬಾಣಂತಿ ಸಾವು

By

Published : Aug 7, 2019, 6:19 PM IST

ಬೀದರ್:ಹೆರಿಗೆಯಾದ ನಂತರ ಎದೆ ಹಾಗೂ ಹೊಟ್ಟೆ ನೋವಿನಿಂದ ಬಳಲಿ ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ. ನಗರದ ಬ್ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಸಾವಿಗೆ ಕಾರಣವೆಂದು ಆಕೆ ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಹೆರಿಗೆ ಬಳಿಕ ಬಾಣಂತಿ ಸಾವು

ಬ್ರಿಮ್ಸ್ ಆಸ್ಪತ್ರೆಯಲ್ಲಿ ತಾಲೂಕಿನ ಚಟನಳ್ಳಿ ಗ್ರಾಮದ ನಾಗಮ್ಮ(26) ಸೋಮವಾರ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಹೆರಿಗೆ ನಂತರ ನಾಗಮ್ಮಗೆ ಎದೆ ಹಾಗೂ ಹೊಟ್ಟೆ ನೋವು ಜಾಸ್ತಿಯಾಗಿತ್ತು. ಕುಟುಂಬಸ್ಥರು ಹಲವು ಬಾರಿ ವೈದ್ಯರಿಗೆ ಈ ಬಗ್ಗೆ ತಿಳಿಸಿದರೂ ಯಾರೊಬ್ಬರೂ ಗಮನ ಹರಿಸಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬದ ಸದಸ್ಯರು ಕೆಲ ಹೊತ್ತು ಮೃತದೇಹವನ್ನು ಆಸ್ಪತ್ರೆಯ ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಪೊಲೀಸರು, ಬ್ರಿಮ್ಸ್ ನ ಹಿರಿಯ ವೈದ್ಯಾಧಿಕಾರಿಗಳು ಬಂದು ಪರಿಸ್ಥಿತಿ ತಿಳಿಸಿಗೊಳಿಸಿದರು.

ABOUT THE AUTHOR

...view details