ಬೀದರ್: ಬಿಸಿಲಿನ ತಾಪ ಹೆಚ್ಚಾಗ್ತಿದ್ದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇಂತಹ ಪರಿಸ್ಥಿತಿಯಲ್ಲೇ ಚುನಾವಣೆ ಪ್ರಚಾರಕ್ಕೆ ಜನರ ಬಳಿ ತೆರಳುವ ರಾಜಕೀಯ ನಾಯಕರಿಗೆ ಜನರ ನೀರಿನ ಸಮಸ್ಯೆ ಸಂಕಟವಾಗಿ ಕಾಡ್ತಿದೆ. ನಾಯಕರೆದುರು ಜನ ಬಹಿರಂಗವಾಗೆ ಅಸಮಾಧಾನ ಹೊರ ಹಾಕ್ತಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕು, ಭಾಲ್ಕಿ, ಬೀದರ್ ಗ್ರಾಮಾಂತರ ಪ್ರದೇಶದ ಹಳ್ಳಿಗಳಲ್ಲಿ ಜನರು ಮನೆಗೆ ನೀರು ತರಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೆ, ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಮೂವರು ಸಚಿವರು ಇರುವ ಬರದ ನಾಡಿನಲ್ಲಿ ಗ್ರಾಮಾಂತರ, ಅದರಲ್ಲೂ ಔರಾದ್, ಭಾಲ್ಕಿ ಹಾಗೂ ಬೀದರ್ ತಾಲೂಕಿನ ಜನರು ನೀರಿಗಾಗಿ ಪರದಾಡಿ ಹೈರಾಣಾಗುತ್ತಿದ್ದಾರೆ.