ಬೀದರ್ :ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ರಾಮಯ್ಯ ಎಲ್ಲಿದ್ರೂ ನಮ್ ನಾಯಕ, ಡಿ ಕೆ ಅವ್ರು ಎಟ್ ಗಂಡ್ಸ್ ಅಂತಾ ಗೊತ್ತೈತಿ ನನ್ಗಾ.. ಸಚಿವ ಜಾರಕಿಹೊಳಿ - bidar news
ತನ್ನನ್ನು ಯಾರು ಜೈಲಿಗೆ ಕಳುಹಿಸಿದ್ದಾರೋ ಅವರನ್ನ ಸುಮ್ಮನೇ ಬಿಡೋದಿಲ್ಲ ಅಂತಾ ನಿನ್ನೆ ಡಿಕೆಶಿ ಹೇಳಿದ್ದಾರಲ್ಲ ಅಂತಾ ಮಾಧ್ಯಮದವರು ಪ್ರಶ್ನಿಸಿದಾಗ, ನೋಡ್ರೀ ಅವನ ವೈಯಕ್ತಿಕ ವಿಚಾರಗಳಿಗೆ ಪ್ರತಿಕ್ರಿಯಿಸಲ್ಲ, ರಾಜಕೀಯವಾಗಿ ಡಿಕೆಶಿ ಬಗ್ಗೆ ಏನ್ ಹೇಳ್ಬೇಕೋ ಅದನ್ನ ಈಗಾಗಲೇ ಹೇಳಿದ್ದೀನಿ..
ಜಿಲ್ಲಾ ಪ್ರವಾಸದ ವೇಳೆ ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ನಾಯಕರು. ನಾನು ಯಾವ ಪಕ್ಷದಲ್ಲಿದ್ದರೂ ಅವರು ನಮ್ಮ ನಾಯಕರೇ..ಡಿ ಕೆ ಅವ್ರು ಎಟ್ ಗಂಡ್ಸಾ ಅಂತಾ ಗೊತ್ತೈತಿ ನನ್ಗಾ ಅವರ ಬಗ್ಗೆ ಹೆಚ್ಚಿಗೆ ಮಾತನಾಡೋದಿಲ್ಲ ಬಿಡಿ ಎಂದರು. ತನ್ನನ್ನು ಯಾರು ಜೈಲಿಗೆ ಕಳುಹಿಸಿದ್ದಾರೋ ಅವರನ್ನ ಸುಮ್ಮನೇ ಬಿಡೋದಿಲ್ಲ ಅಂತಾ ನಿನ್ನೆ ಡಿಕೆಶಿ ಹೇಳಿದ್ದಾರಲ್ಲ ಅಂತಾ ಮಾಧ್ಯಮದವರು ಪ್ರಶ್ನಿಸಿದಾಗ, ನೋಡ್ರೀ ಅವನ ವೈಯಕ್ತಿಕ ವಿಚಾರಗಳಿಗೆ ಪ್ರತಿಕ್ರಿಯಿಸಲ್ಲ, ರಾಜಕೀಯವಾಗಿ ಡಿಕೆಶಿ ಬಗ್ಗೆ ಏನ್ ಹೇಳ್ಬೇಕೋ ಅದನ್ನ ಈಗಾಗಲೇ ಹೇಳಿದ್ದೀನಿ ಅಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್, ಸಂಸದ ಭಗವಂತ ಖೂಬಾ, ಶಾಸಕರಾದ ರಾಜಶೇಖರ್ ಪಾಟೀಲ್, ಬಂಡೆಪ್ಪ ಕಾಶೆಂಪೂರ್, ರಹೀಂಖಾನ್ ಸೇರಿ ಹಲವರು ಉಪಸ್ಥಿತರಿದ್ದರು.