ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ಕುಡಿಯುವ ನೀರಿಗೆ ಪರದಾಟ... ಬಿಂದಿಗೆ ನೀರಿಗೆ 2 ಕಿ ಮೀ ಹೋಗಬೇಕು - Water problem in bidar

ಕಳೆದ ಎರಡು ತಿಂಗಳಿಂದ ಈ ಬಡಾವಣೆ ನಿವಾಸಿಗರು ಕುಡಿಯುವ ಹನಿ ನೀರಿಗೂ ಪರದಾಡ್ತಿದ್ದಾರೆ. ಬೆಳಿಗ್ಗೆ, ರಾತ್ರಿಯಾದ್ರೆ ಸಾಕು ಎರಡು ಕಿಲೋ ಮಿಟರ್ ದೂರದ ಬೋರ್​ವೇಲ್ ನಿಂದ ನೀರು ತಂದು ಬಳಕೆ ಮಾಡಬೇಕಾಗಿದೆ

ಬೀದರ್​ನಲ್ಲಿ ಕುಡಿಯುವ ನೀರಿಗೆ ಪರದಾಟ.

By

Published : Apr 27, 2019, 4:03 AM IST

ಬೀದರ್: ಭೀಕರ ಬರದಿಂದ ಭೂಮಿ ಬರಡಾಗಿದ್ದು, ಜನರು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಗರದಲ್ಲಿ ಉಲ್ಬಣಗೊಂಡಿದೆ.

ನಗರದ ಸಂಗಮೇಶ್ವರ ಬಡಾವಣೆಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಕಳೆದ ಎರಡು ತಿಂಗಳಿಂದ ಈ ಬಡಾವಣೆ ನಿವಾಸಿಗರು ಕುಡಿಯುವ ಹನಿ ನೀರಿಗೂ ಪರದಾಡ್ತಿದ್ದಾರೆ. ಬೆಳಿಗ್ಗೆ, ರಾತ್ರಿಯಾದ್ರೆ ಸಾಕು ಎರಡು ಕಿಲೋ ಮಿಟರ್ ದೂರದ ಬೋರ್​ವೇಲ್ ನಿಂದ ನೀರು ತಂದು ಬಳಕೆ ಮಾಡಬೇಕಾಗಿದೆ.

ಬೀದರ್​ನಲ್ಲಿ ಕುಡಿಯುವ ನೀರಿಗೆ ಪರದಾಟ.

ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದ ಜನ ನಾಯಕರು ಬೆಟ್ಟದಷ್ಟು ಭರವಸೆ ಕೊಟ್ಟು ಈಗ ಕಾಣದಂತೆ ಮಾಯವಾಗಿದ್ದಾರೆ. ನಗರಸಭೆ ಅಧಿಕಾರಿಗಳು ಕಣ್ಣಿಗೆ ಕಂಡರು ಜಾಣಕುರುಡರಂತೆ ವರ್ತಿಸುತ್ತಿದ್ದು, ಸಮಸ್ಯೆ ಮತ್ತಷ್ಟು ಹೆಚ್ಚಾಗತೊಡಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details