ಕರ್ನಾಟಕ

karnataka

ETV Bharat / state

ಜೈಲಿನಲ್ಲೂ ಕಾಡಿದ ನೀರಿನ ಬರ... 23 ಕೈದಿಗಳ ಸ್ಥಳಾಂತರ...! - 23 ವಿಚಾರಣಾಧೀನ ಕೈದಿಗಳು

ಬೀದರ್​​ನಲ್ಲಿ ಭೀಕರ ಬರದಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು ಈಗ ಕುಡಿಯುವ ನೀರಿನ ಎಫೆಕ್ಟ್ ಕೈದಿಗಳಿಗೆ ತಟ್ಟಿದೆ.

ಸ್ಥಳಾಂತರ

By

Published : Oct 21, 2019, 4:24 AM IST

ಬೀದರ್: ಬೀದರ್​ ಜಿಲ್ಲೆಯಲ್ಲಿನ ಬರದ ಛಾಯೆ ಜೈಲಿಗೂ ತಟ್ಟಿದ್ದು, ಬಂಧಿಖಾನೆಯಲ್ಲಿದ್ದ 23 ವಿಚಾರಣಾಧೀನ ಕೈದಿಗಳ ಸ್ಥಳಾಂತರಕ್ಕೆ ಆದೇಶ ನೀಡಲಾಗಿದೆ.

ಜಿಲ್ಲೆಯ ಔರಾದ್ ಉಪ ಬಂದಿಖಾನೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಕೈದಿಗಳಿಗೆ ಸ್ನಾನ, ಶೌಚಾಲಯ ಹಾಗೂ ಕುಡಿಯಲು ನೀರಿನ ಬವಣೆ ಉಲ್ಬಣಗೊಂಡಿದೆ. ಇಂತಹ ಸಂದರ್ಭದಲ್ಲಿ ಕೈದಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಕಾರಾಗೃಹದಿಂದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ಬಂದಿಖಾನೆ ವೀಕ್ಷಕ ಮಹಿಬೂಬ್ ಸರದಾಂಗಿ ಕ್ರಮ ಕೈಗೊಂಡಿದ್ದಾರೆ.

ನೀರಿನ ಬರದಿಂದ ಕಂಗ್ಗೆಟ್ಟ 23 ಕೈದಿಗಳ ಸ್ಥಳಾಂತರ
23 ಕೈದಿಗಳ ಸ್ಥಳಾಂತರ
ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾರಕಕ್ಕೇರಿದ್ದು ಕೈದಿಗಳು ನೀರಿಲ್ಲದೆ ಪರದಾಡುವಂತಾಗಿದೆ. ಹೀಗಾಗಿ 23 ಜನ ವಿಚಾರಣಾಧಿನ ಕೈದಿಗಳ ಸ್ಥಳಾಂತರ ಮಾಡಲಾಗಿದೆ .

ABOUT THE AUTHOR

...view details