ಕರ್ನಾಟಕ

karnataka

ETV Bharat / state

ಸತತ ಮಳೆಯಿಂದ ಕುಸಿದ ಮನೆ ಗೋಡೆ, ಕಂಗಾಲಾದ ವೃದ್ಧೆ - Bidar rain news

ಮಳೆಯಿಂದಾಗಿ ಔರಾದ್ ತಾಲೂಕಿನ ಮಹಾರಾಜವಾಡಿ ಗ್ರಾಮದ ಬಾಲಮ್ಮ ಕುಂಬಾರ ಎಂಬವರ ಮನೆ ಗೋಡೆ ಕುಸಿದಿದೆ. ಹೀಗಾಗಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ವೃದ್ಧೆ ಆಗ್ರಹಿಸಿದ್ದಾರೆ.

Wall fell down due to rain
Wall fell down due to rain

By

Published : Aug 19, 2020, 3:55 PM IST

ಬೀದರ್: ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದ ಪರಿಣಾಮ ವೃದ್ಧೆ ಕಂಗಾಲಾಗಿದ್ದಾರೆ.

ಮನೆಗೋಡೆ ಕುಸಿದಿರುವ ಸ್ಥಳದಲ್ಲಿ ವೃದ್ಧೆ ಬಾಲಮ್ಮ

ಜಿಲ್ಲೆಯ ಔರಾದ್ ತಾಲೂಕಿನ ಮಹಾರಾಜವಾಡಿ ಗ್ರಾಮದ ಬಾಲಮ್ಮ ಕುಂಬಾರ ಎಂಬವರ ಮನೆ ಗೋಡೆ ಕುಸಿದಿದೆ. ಇದು ಮಣ್ಣಿನಿಂದ ನಿರ್ಮಿಸಿದ ಹಳೆಯ ಮನೆಯಾಗಿದ್ದು, ರಾತ್ರಿ ಹೊತ್ತಿನಲ್ಲಿ ವೃದ್ಧೆ ಮಲಗಿರುವಾಗ ಗೋಡೆ ಕುಸಿದಿದೆ. ಮುಂಜಾನೆ ಆಗುವಷ್ಟರಲ್ಲಿ ಮನೆ ತುಂಬೆಲ್ಲಾ ನೀರು ಆವರಿಸಿಕೊಂಡು ಮೇಲ್ಚಾವಣಿ ಕೂಡಾ ಕುಸಿಯುವ ಹಂತ ತಲುಪಿದೆ.

ಹೀಗಾಗಿ ಸದ್ಯ ತನ್ನ ಮನೆ ಬಿಟ್ಟು ಪಕ್ಕದವರ ಮನೆಯಲ್ಲಿ ವೃದ್ಧೆ ನೆಲೆಸಿದ್ದಾರೆ‌. ಮನೆ ಇಲ್ಲದೆ ಸಂಕಷ್ಟಕ್ಕೊಳಗಾದ ಅವರಿಗೆ ಮನೆಯನ್ನು ಮರು ನಿರ್ಮಿಸುವುದು ಸುಲಭದ ಮಾತಲ್ಲ. ಹೀಗಾಗಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ವೃದ್ಧೆ ಬಾಲಮ್ಮ ಆಗ್ರಹಿಸಿದ್ದಾರೆ.

ABOUT THE AUTHOR

...view details