ಕರ್ನಾಟಕ

karnataka

ETV Bharat / state

ಜಾಪೂರವಾಡಿಯಲ್ಲಿ ಬುಟ್ಟಿ ಜಾತ್ರೆ: ಕೊರೊನಾ ಮುಕ್ತ ಸಮಾಜಕ್ಕಾಗಿ ಗ್ರಾಮಸ್ಥರ ಪ್ರಾರ್ಥನೆ - ಬಸವಕಲ್ಯಾಣ ಸುದ್ದಿ

ಮಾರಕ ಕೊರೊನಾ ಸೋಂಕು ಹಾವಳಿ ಹೆಚ್ಚಾಗಿರುವ ಕಾರಣ ಸಾಮೂಹಿಕ ಭೋಜನ ರದ್ದುಪಡಿಸಿ, ದೇವರಿಗೆ ನೈವೇದ್ಯ ಸಮರ್ಪಿಸಿ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

pooja
pooja

By

Published : Jul 10, 2020, 1:46 PM IST

Updated : Jul 10, 2020, 5:50 PM IST

ಬಸವಕಲ್ಯಾಣ(ಬೀದರ್): ಮಳೆ, ಬೆಳೆ ಸಮೃದ್ಧಿ ಜೊತೆಗೆ ಸಮಾಜಕ್ಕೆ ಕಾಡುತ್ತಿರುವ ಮಾರಕ ಕೊರೊನಾ ಮುಕ್ತ ಸಮಾಜಕ್ಕಾಗಿ ಪ್ರಾರ್ಥಿಸಿ ತಾಲೂಕಿನ ಜಾಪೂರವಾಡಿಯಲ್ಲಿ ಬುಟ್ಟಿ ಜಾತ್ರೆ ನಡೆಸಲಾಯಿತು.

ಮಲೋದಿ, ಧಪಾಡಿ, ಚಿತ್ರಾನ್ನ, ಬೆಲ್ಲದಿಂದ ತಯಾರಿಸಿದ ಆಳಿ ಹಾಗೂ ಬಗೆ ಬಗೆಯ ಪಲ್ಯ ಸಿದ್ಧಪಡಿಸಿಕೊಂಡು ಗ್ರಾಮದ ಹೊರ ವಲಯದಲ್ಲಿರುವ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ತೆರಳಿದ ಗ್ರಾಮಸ್ಥರು, ದರ್ಗಾದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಜಾಪೂರವಾಡಿಯಲ್ಲಿ ಬುಟ್ಟಿ ಜಾತ್ರೆ

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿದು, ಬೆಳೆಗಳೆಲ್ಲವೂ ಸಮೃದ್ಧವಾಗಿ ಬೆಳೆಯಲಿ ಎನ್ನುವ ಹರಕೆಯೊಂದಿಗೆ ಪ್ರತಿ ವರ್ಷ ಬುಟ್ಟಿ ಜಾತ್ರೆ ನಡೆಸುವ ಗ್ರಾಮಸ್ಥರು, ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಲ್ಲಿಯೇ ಸಾಮೂಹಿಕ ಭೋಜನ ಮಾಡುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಮಾರಕ ಕೊರೊನಾ ಸೋಂಕು ಹಾವಳಿ ಹೆಚ್ಚಾಗಿರುವ ಕಾರಣ ಸಾಮೂಹಿಕ ಭೋಜನ ರದ್ದುಪಡಿಸಿ, ಕೇವಲ ದೇವರಿಗೆ ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು.

ಮಾರಕ ಕೊರೊನಾ ನಿಯಂತ್ರಣಗೊಂಡು ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕು. ಉತ್ತಮ ಮಳೆಯಾಗುವ ಮೂಲಕ ಈ ವರ್ಷದ ಬೆಳೆಗಳೆಲ್ಲವೂ ಸಮೃದ್ಧವಾಗಿ ಬೆಳೆದು ಜನರ ಕಷ್ಟ, ನಷ್ಟ ದೂರವಾಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು. ಬುಟ್ಟಿ ಜಾತ್ರೆಯಲ್ಲಿ ಗ್ರಾಮದ ಪ್ರಮುಖರು, ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

Last Updated : Jul 10, 2020, 5:50 PM IST

ABOUT THE AUTHOR

...view details