ಕರ್ನಾಟಕ

karnataka

ETV Bharat / state

ಬಸವಕಲ್ಯಾಣ ಉಪಕದನಕ್ಕೆ ವಿಜಯೇಂದ್ರ ಎಂಟ್ರಿ: ಬಿಜೆಪಿ ಪಾಳಯದಲ್ಲಿ ಹೆಚ್ಚಿದ ಜೋಶ್

ಖಾಸಗಿ ಕಾರ್ಯಕ್ರಮದ ನಿಮಿತ್ತ ಕಲಬುರಗಿಗೆ ಆಗಮಿಸಿದ ಬಿವೈ ವಿಜಯೇಂದ್ರ ಅವರು ಬೆಳಗ್ಗೆ ಅಲ್ಲಿಂದ ಬಸವಕಲ್ಯಾಣಕ್ಕೆ ಭೇಟಿ ನೀಡಿದರು. ವಿವಿಧ ಮಠ, ಮಂದಿರಗಳಿಗೆ ತೆರಳಿ ದರ್ಶನ ಪಡೆಯುವ ಮೂಲಕ ಚುನಾವಣೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಬಸವಕಲ್ಯಾಣ ಉಪಕದನಕ್ಕೆ ವಿಜಯೇಂದ್ರ ಎಂಟ್ರಿ
ಬಸವಕಲ್ಯಾಣ ಉಪಕದನಕ್ಕೆ ವಿಜಯೇಂದ್ರ ಎಂಟ್ರಿ

By

Published : Nov 13, 2020, 9:12 PM IST

ಬಸವಕಲ್ಯಾಣ (ಬೀದರ್​):ಕೆಲವೇ ದಿನಗಳಲ್ಲಿ ನಡೆಯಲಿರುವ ಕ್ಷೇತ್ರದ ಉಪಕದನಕ್ಕೆ ಬಿಜೆಪಿ ಅಧಿಕೃತ ಚಾಲನೆ ನೀಡಿದ್ದು, ಚುನಾವಣೆ ತಂತ್ರಗಾರಿಕೆ ರೂಪಿಸುವಲ್ಲಿ ಎತ್ತಿದ ಕೈ ಎಂದೇ ಪ್ರಖ್ಯಾತಿ ಪಡೆದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಶುಕ್ರವಾರ ನಗರಕ್ಕೆ ಆಗಮಿಸಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಪಕ್ಕದ ಕಲಬುರಗಿಗೆ ಆಗಮಿಸಿದ ಬಿವೈ ವಿಜಯೇಂದ್ರ ಅವರು ಬೆಳಗ್ಗೆ ಅಲ್ಲಿಂದ ಬಸವಕಲ್ಯಾಣಕ್ಕೆ ಭೇಟಿ ನೀಡಿ ವಿವಿಧ ಮಠ, ಮಂದಿರಗಳಿಗೆ ತೆರಳಿ ದರ್ಶನ ಪಡೆಯುವ ಮೂಲಕ ಚುನಾವಣೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಇಲ್ಲಿಯ ಅನುಭವ ಮಂಟಪಕ್ಕೆ ಭೇಟಿ ನೀಡಿ ದರ್ಶನ ಪಡೆದ ವಿಜಯೇಂದ್ರ ಅಲ್ಲಿಂದ, ಗವಿ ಮಠಕ್ಕೆ ಭೇಟಿ ನೀಡಿ ಪೂಜ್ಯರಿಂದ ಸನ್ಮಾನ ಸ್ವೀಕರಿಸಿದರು. ನಂತರ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು, ದಾಸೋಹ ಮಂಟಪದಲ್ಲಿ ಪ್ರಸಾದ ಸ್ವೀಕರಿಸಿ ಮರಳಿ ಬೆಂಗಳೂರಿಗೆ ತೆರಳಿದರು. ವಿಜಯೇಂದ್ರ ಅವರು ತಾಲೂಕಿಗೆ ಪ್ರವೇಶ ಪಡೆಯುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರ ಆಹಾರ ನಿಗಮ ಮಂಡಳಿ ಸದಸ್ಯ ಉಮೇಶ ಬಿರಬಿಟ್ಟೆ ಸ್ವಾಗತಿಸಿ ಬರಮಾಡಿಕೊಂಡರು. ಸಸ್ತಾಪೂರ ಬಂಗ್ಲಾ ಬಳಿ ಜಿಪಂ ಸದಸ್ಯ ಗುಂಡುರೆಡ್ಡಿ, ಮಿನಿ ವಿಧಾನಸೌಧದ ಬಳಿ ಶರಣು ಸಲಗರ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ನಗರದ ಮುಖ್ಯರಸ್ತೆಯಲ್ಲಿ ಯುವ ಮುಖಂಡ ಪ್ರದೀಪ ವಾತಾಡೆ ಅವರಿಂದ ಪುಷ್ಪವೃಷ್ಟಿಗೈದು ಗೌರವಿಸಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ಬಸವಕಲ್ಯಾಣ ಉಪಕದನಕ್ಕೆ ವಿಜಯೇಂದ್ರ ಎಂಟ್ರಿ

ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗಬೇಕು ಎನ್ನುವ ಈ ಭಾಗದ ಬಸವಾಭಿಮಾನಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಈಗಾಗಲೇ 500 ಕೋಟಿ ರೂ. ಅನುದಾನ ಘೋಷಿಸಿ, 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಂಟಪ ನಿರ್ಮಾಣಕ್ಕಾಗಿ 50 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಬರುವ ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಬಸವಕಲ್ಯಾಣ ದೇಶವಷ್ಟೆ ಅಲ್ಲ, ಅಂತರಾಷ್ಟ್ರೀಯಮಟ್ಟದಲ್ಲಿ ಗಮನ ಸೆಳೆಯುವಂತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಂತರ ನಗರದ ವರ್ಷಾ ಕಲ್ಯಾಣ ಮಂಟಪದಲ್ಲಿ ಮರಾಠಾ ಸಮಾಜದಿಂದ ಆಯೋಜಿಸಿದ ಸಭೆಯಲ್ಲಿ ಪಾಲ್ಗೊಂಡು, ಸಮಾಜದ ಪ್ರಮುಖ ಬೇಡಿಕೆಗಳಾದ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ವಿಜಯೇಂದ್ರ:

ಬಸವಕಲ್ಯಾಣ ಕ್ಷೇತ್ರದಿಂದ ನಡೆಯುತ್ತಿರುವ ಉಪಚುನಾವಣೆಗೆ ವಿಜಯೇಂದ್ರ ಅವರೇ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಿಮ್ಮ ನಿರ್ಧಾರವೇನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಅಭ್ಯರ್ಥಿ ಆಯ್ಕೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದು. ನಮ್ಮದೇನಿದ್ದರೂ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವುದಷ್ಟೆ ನಮ್ಮ ಕೆಲಸ ಎಂದರು. ಬೀದರ್ ಜಿಲ್ಲೆಯಲ್ಲಿ ನಮ್ಮ ತಂದೆಯವರ ಮೇಲೆ ಇರುವ ನಂಬಿಕೆ ಮತ್ತು ಗೌರವದಿಂದಾಗಿ ಜನರು ಹಾಗೆ ಮಾತನಾಡಿಕೊಳ್ಳುತ್ತಿರಬಹುದು. ಆದರೆ ಅಭ್ಯರ್ಥಿ ಯಾರಾಗಬೇಕು ಎಂಬ ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎಂದರು.

ABOUT THE AUTHOR

...view details