ಬೀದರ್:ಕೊರೋನಾ ಮಹಾಮಾರಿ ಪ್ರಪಂಚದಾದ್ಯಂತ ಜನರ ಬದುಕನ್ನೇ ಅಸ್ತವ್ಯಸ್ತ ಮಾಡಿತ್ತು. ಈ ವೇಳೆ, ಜನರು ವಿವಿಧ ಹರಕೆ ಹೊತ್ತುಕೊಂಡಿದ್ದರು. ಇಲ್ಲೊಬ್ಬರು ಕೊರೊನಾ ರೋಗ ಮುಕ್ತವಾದರೆ ತೆಲಂಗಾಣದಿಂದ ಕರ್ನಾಟಕದ ಘತ್ತರಗಿವರೆಗೆ ಉರುಳು ಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದು, ಇದೀಗ ನೆರವೇರಿಸುತ್ತಿದ್ದಾರೆ.
ಕೊರೋನಾ ಮೋಕ್ಷಕ್ಕಾಗಿ ತೆಲಂಗಾಣದಿಂದ ಘತ್ತರಗಿಗೆ ಉರುಳು ಸೇವೆ - ಈಟಿವಿ ಭಾರತ ಕನ್ನಡ
ಕೊರೋನಾ ಮಹಾಮಾರಿಯ ಮೋಕ್ಷಕ್ಕಾಗಿ ತೆಲಂಗಾಣದಿಂದ ಘತ್ತರಗಿಗೆ ಹರಕೆ ಹೊತ್ತು ಶಶಿಕಲಾ ಮಾತೆ ಉರುಳು ಸೇವೆ ಮಾಡುತ್ತಿದ್ದಾರೆ.
ಶಶಿಕಲಾ ಮಾತೆ ಎಂಬವರು ನವೆಂಬರ್ 11ರಂದು ತೆಲಂಗಾಣದ ಜಹೀರಾಬಾದ ತಾಲೂಕು ಧನುಶ್ರೀ ಗ್ರಾಮದ ಭವಾನಿ ದೇವಸ್ಥಾನದಿಂದ ಉರುಳು ಸೇವೆ ಪ್ರಾರಂಭಿಸಿದ್ದಾರೆ. ಬರೋಬ್ಬರಿ 200 ಕಿ.ಮೀ ಉರುಳು ಸೇವೆ ಮಾಡುತ್ತಿರುವ ಶಶಿಕಲಾ, ಬೀದರ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮಕ್ಕೆ ತಲುಪಿದ್ದು, ಅವರ ದರ್ಶನ ಪಡೆಯಲು ಜನರು ಮುಗಿ ಬೀಳುತ್ತಿದ್ದಾರೆ. ಇವರೊಂದಿಗೆ ನೂರಾರು ಭಕ್ತರು ಹೆಜ್ಜೆ ಹಾಕುತ್ತಿದ್ದು, ಉರುಳು ಸೇವೆ ಉದ್ದಕ್ಕೂ ಭಜನೆ, ಕೀರ್ತನೆ, ಸತ್ಸಂಗ ಭವಾನಿ ಮಾತೆಯ ಕುರಿತು ಆಶೀರ್ವಚನ ನೀಡುತ್ತಾ ಗ್ರಾಮದಿಂದ ಗ್ರಾಮಕ್ಕೆ ಸಾಗುತ್ತಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣ