ಬಸವಕಲ್ಯಾಣ:ಹಳ್ಳದ ನೀರಿನಲ್ಲಿ ಬಿದ್ದು ಮೃತಪಟ್ಟ ಅಪರಿಚಿತ ವ್ಯಕ್ತಿಯೊಬ್ಬರ ಶವ ಅತಲಾಪೂರ ಗ್ರಾಮದ ಬಳಿ ಪತ್ತೆಯಾಗಿದೆ. ಮೃತರು ಕಪ್ಪು ಬಣ್ಣದ ಪ್ಯಾಂಟ್, ಹಸಿರು ಬಣ್ಣದ ಸ್ವೆಟರ್ ಧರಿಸಿದ್ದಾರೆ.
ಬಸವಕಲ್ಯಾಣ: ಹಳ್ಳದ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ - Bidar District News
ಹಳ್ಳದ ನೀರಿನಲ್ಲಿ ಬಿದ್ದು ಮೃತಪಟ್ಟ 40 ವರ್ಷದ ಆಸುಪಾಸಿನ ಅಪರಿಚಿತ ವ್ಯಕ್ತಿಯೊಬ್ಬರ ಶವ ಅತಲಾಪೂರ ಗ್ರಾಮದ ಬಳಿ ಪತ್ತೆಯಾಗಿದೆ.
ಅಪರಿಚಿತ ವ್ಯಕ್ತಿಯ ಶವ
ಮೃತ ವ್ಯಕ್ತಿ 40 ವರ್ಷದ ಆಸುಪಾಸಿನವರಾಗಿದ್ದು, ಸುಮಾರು ನಾಲ್ಕೈದು ದಿನಗಳ ಹಿಂದೆ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಶವ ನೀರಿನಲ್ಲಿ ತೇಲಿಕೊಂಡು ಅತಲಾಪೂರ ಬಳಿಯ ರಸ್ತೆಯ ಸೇತುವೆಯಲ್ಲಿ ಬಂದು ನಿಂತಿದೆ.
ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್ಐ ಎಚ್.ಜಯಶ್ರೀ ಹಾಗೂ ಸಿಬ್ಬಂದಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.