ಕರ್ನಾಟಕ

karnataka

ETV Bharat / state

ಸ್ವಪಕ್ಷೀಯರಿಂದಲೇ ಕೇಂದ್ರ ಸಚಿವ ಭಗವಂತ ಖೂಬಾ ಕಾರಿನ ಮೇಲೆ ದಾಳಿ - ಭಗವಂತ ಖೂಬಾ ಮೇಲೆ ಹಲ್ಲೆ

ಬಸವಕಲ್ಯಾಣ ತಾಲೂಕಿನಲ್ಲಿ ಶನಿವಾರ ಸಂಜೆ ಕೇಂದ್ರ ಸಚಿವ ಭಗವಂತ ಖೂಬಾ ಅವರ ಕಾರಿನ ಮೇಲೆ ಸ್ವಪಕ್ಷದವರೇ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸ್ವಪಕ್ಷದವರಿಂದಲೇ ಕೇಂದ್ರ ಸಚಿವ ಭಗವಂತ ಖೂಬಾ ಕಾರಿನ ಮೇಲೆ ದಾಳಿ
Union Minister Bhagwant Khuba car attacked by his own party members

By

Published : Aug 14, 2022, 1:25 PM IST

Updated : Aug 14, 2022, 1:34 PM IST

ಬೀದರ್: ದೇಶದೆಲ್ಲೆಡೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಮನೆಮಾಡಿದ್ದರೆ ಬೀದರ್​​ನಲ್ಲಿ ಭಾರತೀಯ ಜನತಾ ಪಕ್ಷದ ಒಳಜಗಳ ಬೀದಿಗೆ ಬಂದಿದೆ. ಬಸವಕಲ್ಯಾಣ ತಾಲೂಕಿನಲ್ಲಿ ಶನಿವಾರ ಸಂಜೆ ಕೇಂದ್ರ ಸಚಿವ ಭಗವಂತ ಖೂಬಾ ಅವರ ಕಾರಿನ ಮೇಲೆ ಸ್ವಪಕ್ಷದವರೇ ದಾಳಿ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಭಗವಂತ ಖೂಬಾ ಕಾರಿನ ಮೇಲೆ ದಾಳಿ - ವೈರಲ್ ವಿಡಿಯೋ

ಸ್ವಾತಂತ್ರ್ಯೋತ್ಸವ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾರ್ ರ್ಯಾಲಿಯಲ್ಲಿ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ ಅವರನ್ನು ಕಡೆಗಣನೆ ಮಾಡಿದ್ದಾರೆಂದು ಆರೋಪಿಸಿ ಖೂಬಾ ಹಾಗೂ ಶರಣು ಸಲಗರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಸಚಿವರ ಕಾರಿನ ಮೇಲೆ ದಾಳಿ ಮಾಡಿದ ಕಾರ್ಯಕರ್ತರು ಕಾರಿನ ನಂಬರ್ ಪ್ಲೇಟ್ ಕಿತ್ತೆಸೆದು ದಾಂಧಲೆ ಮಾಡಿದರು. ಈ ಘಟನೆಯಿಂದಾಗಿ ಸ್ಥಳೀಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಉಂಟಾಗಿದೆ.

ಇದನ್ನೂ ಓದಿ:ಲೋಕ ಅದಾಲತ್​​ನಲ್ಲಿ ಬೇಗುದಿ ಬದಿಗಿಟ್ಟು ಹೊಸ ಬಾಳ್ವೆಗೆ ಒಪ್ಪಿದ 27 ದಂಪತಿ

Last Updated : Aug 14, 2022, 1:34 PM IST

ABOUT THE AUTHOR

...view details