ಕರ್ನಾಟಕ

karnataka

ETV Bharat / state

ಅನಧಿಕೃತ ಎಡಿಫೈ ಶಾಲಾ ದಾಖಲಾತಿ ಬಂದ್ 'ಈಟಿವಿ ಭಾರತ' ಇಂಪ್ಯಾಕ್ಟ್!

ನಿಸರ್ಗ ಎಜ್ಯುಕೇಶನ್ ಫೌಂಡೇಶನ್ ಬೀದರ್​ ನಗರದ ಹೊರ ವಲಯದಲ್ಲಿ ನಿರ್ಮಾಣ ಹಂತದ ಕಟ್ಟಡ ಅಲ್ಲದೆ ಬಸ್ ನಿಲ್ದಾಣ ಪಕ್ಕದಲ್ಲಿ ಕಚೇರಿಯೊಂದನ್ನು ತೆರೆದು, ಬೀದಿ ಬೀದಿಯಲ್ಲಿ ಶೈಕ್ಷಣಿಕ ವರ್ಷದ ಮಕ್ಕಳ ದಾಖಲಾತಿ ಕುರಿತು ಅಬ್ಬರದ ಪ್ರಚಾರ ನಡೆಸಿತ್ತು. ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಶಾಲಾ ದಾಖಲಾತಿಗೆ ಮುಂದಾಗಿದ್ದನ್ನ 'ಈಟಿವಿ ಭಾರತ' ವಿಸ್ತೃತವಾಗಿ ವರದಿ ಪ್ರಸಾರ ಮಾಡಿತ್ತು.

unauthorized-edify-school-enrollment-closed-etv-bharath-impact
ಅನಧಿಕೃತ ಎಡಿಫೈ ಶಾಲಾ ದಾಖಲಾತಿ ಬಂದ್

By

Published : Mar 19, 2020, 4:06 AM IST

ಬೀದರ್:ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ಶಾಲೆಯಲ್ಲಿ ಮಕ್ಕಳ ದಾಖಲಾತಿಗೆ ಮುಂದಾಗಿದ್ದ ನಿಸರ್ಗ ಎಜ್ಯುಕೇಶನ್ ಫೌಂಡೇಶನ್ ನ ಎಡಿಫೈ ಶಾಲೆಯ ದಾಖಲಾತಿ ಬಂದ್ ಮಾಡಿದ್ದು, ಶಾಲೆಯನ್ನ ಈ ವರ್ಷದಲ್ಲಿ ಆರಂಭ ಮಾಡದಿರಲು ಸಂಸ್ಥೆ ನಿರ್ಧಾರ ಮಾಡಿ ಮುಚ್ಚಳಿಕೆ ಬರೆದುಕೊಟ್ಟಿದೆ.

ಅನಧಿಕೃತ ಎಡಿಫೈ ಶಾಲಾ ದಾಖಲಾತಿ ಬಂದ್
ನಗರದ ಹೊರ ವಲಯದಲ್ಲಿ ನಿರ್ಮಾಣ ಹಂತದ ಕಟ್ಟಡ ಅಲ್ಲದೆ ಬಸ್ ನಿಲ್ದಾಣ ಪಕ್ಕದಲ್ಲೆ ಕಚೇರಿಯೊಂದನ್ನು ತೆರೆದು, ಬೀದಿ ಬೀದಿಯಲ್ಲಿ ಶೈಕ್ಷಣಿಕ ವರ್ಷದ ಮಕ್ಕಳ ದಾಖಲಾತಿ ಕುರಿತು ಅಬ್ಬರದ ಪ್ರಚಾರ ನಡೆಸಿತ್ತು.ಈ ಸಂಸ್ಥೆ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ಪಡೆಯದೆ ಅನಧಿಕೃತವಾಗಿ ಶಾಲಾ ದಾಖಲಾತಿಗೆ ಮುಂದಾಗಿರುವುದನ್ನು 'ಈಟಿವಿ ಭಾರತ' ನಲ್ಲಿ ವಿಸ್ತೃತವಾಗಿ ವರದಿ ಪ್ರಸಾರ ಮಾಡಿತ್ತು. ನಂತರ ಸ್ಥಳ ಪರಿಶೀಲನೆ ಮಾಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹೈಟೆಕ್​ ಶಿಕ್ಷಣ ನೀಡುವ ಉದ್ದೇಶ ಇಟ್ಟಕೊಂಡ ಸಂಸ್ಥೆಯೊಂದು ಶಿಕ್ಷಣ ಇಲಾಖೆ ಅನುಮತಿ ಇಲ್ಲದೆ ಮಕ್ಕಳ ಭವಿಷ್ಯದ ಜತೆಯಲ್ಲಿ ಆಟವಾಡ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಸಿ ಚಂದ್ರಶೇಖರ್ ಅವರು ಎಡಿಫೈ ಶಾಲೆಯಲ್ಲಿ ಮಕ್ಕಳನ್ನು ದಾಖಲಿಸದಂತೆ ಮನವಿ ಮಾಡಿದ್ದರು.
ಅನಧಿಕೃತ ಎಡಿಫೈ ಶಾಲಾ ದಾಖಲಾತಿ ಬಂದ್
ಇಷ್ಟಾದ್ರು ಎಡಿಫೈ ಸಂಸ್ಥೆಯವರು ಅಕ್ರಮವಾಗಿ ನಗರದಲ್ಲಿ ಪ್ರಚಾರ ಮಾಡುತ್ತ ಸಾರ್ವಜನಿಕ ಜಾಹಿರಾತು ನೀಡಿರುವುದನ್ನು ಗಮನಿಸಿ ಶಿಕ್ಷಣ ಕಾಯ್ದೆ 1983 ರ ಅನ್ವಯ ಕ್ರಮ ಕೈಗೊಳ್ಳುವ ನೋಟಿಸ್ ನೀಡಿದ ನಂತರ ಸಂಸ್ಥೆ ಲಿಖಿತ ರೂಪದಲ್ಲಿ ಶಾಲೆ ಈ ಶೈಕ್ಷಣಿಕ ವರ್ಷದಲ್ಲಿ ನಡೆಸುವುದಿಲ್ಲ ಎಂದು ಬರೆದುಕೊಟ್ಟಿದೆ ಎಂದು ಡಿಡಿಪಿಐ ಚಂದ್ರಶೇಖರ್ 'ಈಟಿವಿ ಭಾರತ' ಗೆ ತಿಳಿಸಿದ್ದಾರೆ. ಅನುಮತಿ ಇಲ್ಲದ ಶಾಲೆಯಲ್ಲಿ ಅಕ್ರಮ ದಾಖಲಾತಿ ಮಾಡಿಕೊಳ್ಳುವುದರಿಂದ ಮಕ್ಕಳ ಭವಿಷ್ಯದಲ್ಲಿ ದಾಖಲೆ ಪತ್ರಗಳು ಸಿಗುವುದಿಲ್ಲ. ಒಂದು ಶಾಲೆಯಲ್ಲಿ ದಾಖಲಾತಿ ಮತ್ತೊಂದು ಶಾಲೆಯಲ್ಲಿ ಶಿಕ್ಷಣ ನೀಡಿದ್ರು. ಈಗ ಎಲ್ಲವೂ ಆನ್ ಲೈನ್ ಆಗಿದೆ. ಹೀಗಾಗಿ ಅಕ್ರಮ ನಡೆಯುವುದು ಸಾಧ್ಯವೇ ಇಲ್ಲ. ಇಷ್ಟಾದ್ರು ಸಂಸ್ಥೆ ತನ್ನ ವರಸೆ ನಿಲ್ಲಿಸಲಿಲ್ಲ ಎಂದ್ರೆ ಕ್ರಿಮಿನಲ್ ಕೇಸ್ ದಾಖಲಿಸಲು ಇಲಾಖೆ ಹಿಂಜರಿಯುವುದಿಲ್ಲ ಎಂದು ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details