ಬೀದರ್:ಬೀದರ್ಲೋಕಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಲೋಕಮಾನ್ಯ ತಿಲಕ್ ಟರ್ಮಿನಲ್-ಸೊಲ್ಹಾಪುರ (01435/01436) ಹಾಗೂ ಸೊಲ್ಹಾಪುರ-ತಿರುಪತಿ-ಸೊಲ್ಹಾಪುರ (01437/01438) ಎಂಬೆರಡು ವಿಶೇಷ ರೈಲುಗಳು ಸಂಚರಿಸಲಿವೆ. ಸೋಲ್ಹಾಪುರದ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿನಂತಿಸಿದ್ದಾರೆ.
ಲೋಕಮಾನ್ಯ ತಿಲಕ್ ಟರ್ಮಿನಲ್-ಸೊಲ್ಹಾಪುರ ರೈಲು, ಡಿ. 13 ರಿಂದ 2023ರ ಫೆ.14 ರವರೆಗೆ ಪ್ರತಿ ಮಂಗಳವಾರ ಸೊಲ್ಹಾಪುರದಿಂದ ಬೆ. 9.20ಕ್ಕೆ ಹೊರಟು, ಕಲಬುರಗಿ ಮಾರ್ಗವಾಗಿ ಹುಮನಾಬಾದ್‌ಗೆ ಮಧ್ಯಾಹ್ನ 12.39ಕ್ಕೆ, ಬೀದರ್ಗೆ ಮಧ್ಯಾಹ್ನ 2ಕ್ಕೆ, ಭಾಲ್ಕಿಗೆ ಮಧ್ಯಾಹ್ನ 2.49ಕ್ಕೆ ಬರಲಿದೆ. ಅಲ್ಲಿಂದ ಉದಗೀರ, ಲಾತೂರ ರೋಡ್, ಪುಣೆ, ಥಾಣಾ ಮಾರ್ಗವಾಗಿ ಲೋಕಮಾನ್ಯ ತಿಲಕ್ ಟರ್ಮಿನಲ್‍ಗೆ ಮರುದಿನ ಬುಧವಾರ ಬೆ. 3.45ಕ್ಕೆ ತಲುಪಲಿದೆ.
ಡಿ. 14 ರಿಂದ ಫೆ.15 ರವರೆಗೆ ಒಟ್ಟು 12 ಬುಧವಾರಗಳಂದು (ರೈಲು ಸಂಖ್ಯೆ 01436, ಎಲ್.ಟಿ.ಟಿ.- ಸೊಲ್ಹಾಪುರ-ಎಲ್.ಟಿ.ಟಿ.) ಮಧ್ಯಾಹ್ನ 12.50ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ಹೊರಟು ಬಂದ ಮಾರ್ಗವಾಗಿ ಮಧ್ಯರಾತ್ರಿ 2.54ಕ್ಕೆ ಭಾಲ್ಕಿ, ನಸುಕಿನ ಜಾವ 4 ಗಂಟೆಗೆ ಬೀದರ್ ಹಾಗೂ ನಸುಕಿನ ಜಾವ 4.29 ಗಂಟೆಗೆ ಹುಮನಾಬಾದ್‌ಗೆ ತಲುಪಲಿದೆ. ಮುಂದುವರೆದು ಸೊಲ್ಹಾಪುರಕ್ಕೆ ಗುರುವಾರ ಬೆಳಗ್ಗೆ 9.25ಕ್ಕೆ ತಲುಪಲಿದೆ.