ಬೀದರ್ :ಜಿಲ್ಲೆಯಲ್ಲಿಂದು ಇಬ್ಬರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಈ ಇಬ್ಬರು ಸೋಂಕಿತರು ಕೂಡಾ ದೆಹಲಿಯ ತಬ್ಲಿಘಿ ಜಮಾತ್ನಿಂದ ಬಂದವರ ದ್ವಿತೀಯ ಸಂಪರ್ಕದಲ್ಲಿದ್ದವರಾಗಿದ್ದಾರೆ.
ನಿರ್ಬಂಧಿತ ಪ್ರದೇಶದಲ್ಲಿದ್ದ ಇಬ್ಬರಿಗೆ ಕೊರೊನಾ, ಬೀದರ್‌ನಲ್ಲಿ 30ಕ್ಕೇರಿದ ಸೋಂಕಿತರು..
ಬೀದರ್‌ನಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ಓಲ್ಡ್ ಸಿಟಿಯ ನಿರ್ಬಂಧಿತ ವಲಯದಲ್ಲಿ ಸಾಮೂಹಿಕವಾಗಿ ಸೋಂಕು ಪರೀಕ್ಷೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಈವರೆಗೆ 14 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 15 ಮಂದಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾನೆ.
ಓಲ್ಡ್ ಸಿಟಿಯ ಬಡಾವಣೆಗಳಲ್ಲಿ ತಬ್ಲಿಘಿ ಜಮಾತ್ಗೆ ಹೋಗಿ ಬಂದವರಿಂದ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ದ್ವಿತೀಯ ಸಂಪರ್ಕಿತರಲ್ಲಿ ಕಾಣಿಸಿದೆ. ಈಗ ಕಂಡು ಬಂದಿರುವ ಸೋಂಕಿತರನ್ನು ಮೊದಲೇ ಕ್ವಾರಂಟೈನ್ ಮಾಡಿದ ಕಾರಣದಿಂದ ಇನ್ನಷ್ಟು ಮಂದಿಗೆ ಸೋಂಕು ಹರಡುವುದನ್ನು ತಪ್ಪಿಸಿದಂತಾಗಿದೆ.