ಕರ್ನಾಟಕ

karnataka

ETV Bharat / state

ಬ್ಲ್ಯಾಕ್ ಫಂಗಸ್​ಗೆ ಬೀದರ್​ನಲ್ಲಿ ಇಬ್ಬರು ಬಲಿ - ಔರಾದ್ ಪಟ್ಟಣದ ನ್ಯಾಯವಾದಿ ರವಿಕುಮಾರ್ ನೌಬಾದೆ

ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಣಕುಣಿ ಹಾಗೂ ಧುಮ್ಮನಸೂರು ಗ್ರಾಮದಲ್ಲಿ ತಲಾ ಒಂದೊಂದು ಸಾವಿನ ಪ್ರಕರಣ ಬೆಳಕಿಗೆ ಬಂದಿವೆ. ಹಣಕುಣಿ ಗ್ರಾಮದ ಜಗದೇವಿ ರಾಜಶೇಖರ್ ಶೇರಿಕಾರ (47) ಹಾಗೂ ಧುಮನಸೂರು ಗ್ರಾಮದ ಜಗನ್ನಾಥ ಧರ್ಮಾರೆಡ್ಡಿ (45) ಎಂಬುವರು ಬ್ಲ್ಯಾಕ್​ ಫಂಗಸ್​ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

two-killed-in-bidar-for-black-fungus
'ಬ್ಲಾಕ್ ಫಂಗಸ್​ಗೆ' ಬೀದರ್​ನಲ್ಲಿ ಇಬ್ಬರು ಬಲಿ

By

Published : May 20, 2021, 9:35 PM IST

ಬೀದರ್:ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಬಾಧೆ, ಗಡಿ ಜಿಲ್ಲೆ ಬೀದರ್ ನಲ್ಲಿ ಕಾಣಿಸಿಕೊಂಡಿದ್ದು ಮಾರಣಾಂತಿಕ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

ಓದಿ: ಮದುವೆಯಾಗುವ ಸುಳ್ಳು ಭರವಸೆ: ಐದು ದಿನ ಒತ್ತೆಯಾಳಾಗಿಟ್ಟುಕೊಂಡು ಅತ್ಯಾಚಾರ

ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಣಕುಣಿ ಹಾಗೂ ಧುಮ್ಮನಸೂರು ಗ್ರಾಮದಲ್ಲಿ ತಲಾ ಒಂದೊಂದು ಸಾವಿನ ಪ್ರಕರಣ ಬೆಳಕಿಗೆ ಬಂದಿವೆ. ಹಣಕುಣಿ ಗ್ರಾಮದ ಜಗದೇವಿ ರಾಜಶೇಖರ್ ಶೇರಿಕಾರ (47) ಹಾಗೂ ಧುಮನಸೂರು ಗ್ರಾಮದ ಜಗನ್ನಾಥ ಧರ್ಮಾರೆಡ್ಡಿ (45) ಎಂಬುವರು ಸಾವನ್ನಪ್ಪಿದ್ದಾರೆ.

ಜಗದೇವಿಯಲ್ಲಿ ಮೇ 3 ರಂದು ಸೋಂಕು ಪತ್ತೆಯಾಗಿದ್ದು, ಏಪ್ರಿಲ್ 26 ರಂದು ಜಗನ್ನಾಥ ಅವರಲ್ಲಿ ಕೊರೊನಾ ದೃಢಪಟ್ಟಿತ್ತು. ಕೊರೊನಾದಿಂದ ಬಳಲಿದ ಇಬ್ಬರು ಗುಣಮುಖರಾಗಿ ಮನೆಗೆ ವಾಪಸಾಗಿದ್ದರು. ಆದರೆ ಮನೆಗೆ ಬಂದ 10 ದಿನದಲ್ಲೇ ಕಣ್ಣಿನಲ್ಲಿ ಊತ ಕಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ಸ್ಪಷ್ಟವಾಗಿದೆ.

ಔರಾದ್ ನಲ್ಲೂ ಬ್ಲ್ಯಾಕ್ ಫಂಗಸ್:

ಔರಾದ್ ಪಟ್ಟಣದ ವಕೀಲ ರವಿಕುಮಾರ್ ನೌಬಾದೆ ಎಂಬುವರು ಬ್ಲಾಕ್ ಫಂಗಸ್ ಬಾಧೆಯಿಂದ ಬಳಲುತ್ತಿದ್ದು, ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಮೇಲೆ ಮೂಗು ಹಾಗೂ ಕಣ್ಣು ಊತ ಕಂಡು ಬಂದಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details