ಬೀದರ್: ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಇಬ್ಬರು ರೈತರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಕಮಲನಗರ ತಾಲೂಕಿನ ಮುಧೋಳ(ಕೆ) ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಚಿಮ್ಮೆಗಾಂವ್ ಗ್ರಾಮದ ನಿವಾಸಿಗಳಾದ ಕಚರಾಬಾಯಿ ಕೆರಬಾ (30) ಮತ್ತು ಕಿಶನ್ ವಿಟ್ಠಲ್ (28) ಮೃತ ದುರ್ದೈವಿಗಳು. ಘಟನೆಯಲ್ಲಿ ಅರ್ಚನಾ ಮತ್ತು ಕೆರಬಾ ರಾಮಚಂದ್ರ ಎಂಬುವರಿಗೆ ಸುಟ್ಟ ಗಾಯಗಳಾಗಿದೆ. ಇಬ್ಬರು ಔರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.