ಕರ್ನಾಟಕ

karnataka

ETV Bharat / state

ಬೀದರ್​​ನಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿ... ಇಂದು 10 ಮಂದಿಗೆ ತಗುಲಿದ ಸೋಂಕು! - bidar corona updates

ಬೀದರ್​ ಜಿಲ್ಲೆಯಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಅಲ್ಲದೆ ಇಂದು 10 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆಯಾಗಿದೆ.

two corona Infected persons died in bidar
ಬೀದರ್: ಕೊರೊನಾಗೆ ಮತ್ತಿಬ್ಬರು ಬಲಿ...10 ಹೊಸ ಪ್ರಕರಣ ಪತ್ತೆ..!

By

Published : Jun 19, 2020, 8:03 PM IST

ಬೀದರ್:ಜಿಲ್ಲೆಯಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದು, ಇಂದು 10 ಹೊಸ ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯ ದಿನದಯಾಳ್​ ನಗರದ 45 ವಯಸ್ಸಿನ ವ್ಯಕ್ತಿ ಜೂನ್ 11ರಂದು ಸಾವನ್ನಪ್ಪಿದ್ದು, ಇಂದು ಸೋಂಕು ದೃಢಪಟ್ಟಿದೆ. ಅಲ್ಲದೆ ಬಸವಕಲ್ಯಾಣ ನಗರದ ಧಾರಾಗಿರಿ ಬಡಾವಣೆಯ 70 ವರ್ಷದ ವ್ಯಕ್ತಿ ಕೂಡ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 10 ಹೊಸ ಪ್ರಕರಗಳು ದಾಖಲಾಗಿವೆ. ಬೀದರ್ ನಗರದ ಓಲ್ಡ್ ಸಿಟಿಯ ಅಂಬಾದಾಸ ಗಲ್ಲಿಯಲ್ಲಿ 2, ಬಸವಕಲ್ಯಾಣ ತಾಲೂಕಿನ ಬಟಗೇರಾದಲ್ಲಿ 1, ಹಮುನಗರದಲ್ಲಿ 1, ಬೆಟಬಾಲಕುಂದಾದಲ್ಲಿ 1, ಚಿಟಗುಪ್ಪ ಪಟ್ಟಣದ ಭಾಸ್ಕರ್ ನಗರದಲ್ಲಿ 1, ಭಾಲ್ಕಿಯಲ್ಲಿ 1 ಹಾಗೂ ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆಯಾಗಿದ್ದು, 254 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ABOUT THE AUTHOR

...view details