ಕರ್ನಾಟಕ

karnataka

ETV Bharat / state

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು - ಬಸವಕಲ್ಯಾಣದಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ

ಬಸವಕಲ್ಯಾಣ ತಾಲೂಕಿನ ಘೋಟಾಳ ಹಾಗೂ ಜಾಜನಮುಗಳಿ ಗ್ರಾಮದ ನಡುವಿನ ರಸ್ತೆಯೊಂದರಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.

Two bike collide
ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ

By

Published : Sep 8, 2021, 10:17 PM IST

Updated : Sep 8, 2021, 10:38 PM IST

ಬಸವಕಲ್ಯಾಣ:ಬೈಕ್‌ಗಳ ನಡುವೆ ಮುಖಾಮುಖಿ ಅಪಘಾತ ನಡೆದಿದ್ದು ತಾಲೂಕಿನ ಘೋಟಾಳ ಹಾಗೂ ಜಾಜನಮುಗಳಿ ಗ್ರಾಮದ ನಡುವಿನ ರಸ್ತೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೂವರ ಸಾವು

ಘೋಟಾಳ ಗ್ರಾಮದ ನಿವಾಸಿಗಳಾದ ಮನೋಜ ದಗುಡು ಭೋಸ್ಲೆ (18), ಧೀರಾಜ್ ಶಿಂಧೆ (16) ಹಾಗೂ ಜ್ಞಾನೇಶ್ವರ ಜೈಪಾಲ್ ಢಗೆೆ (24) ಮೃತ ದುರ್ದೈವಿಗಳು.

ಈ ಘಟನೆಯಲ್ಲಿ ಮನೋಜ ಹಾಗೂ ಜ್ಞಾನೇಶ್ವರ ಸ್ಥಳದಲ್ಲೇ ಮೃತಪಟ್ಟರೆ, ಧೀರಾಜ್ ಎನ್ನುವವರು ಮಹಾರಾಷ್ಟ್ರದ ಉಮ್ಮರ್ಗಾ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಮೃತದೇಹಗಳು

ಗ್ರಾಮೀಣ ಸಿಪಿಐ ರಘುವೀರ್‌ಸಿಂಗ್ ಠಾಕೂರ ಹಾಗೂ ಪಿಎಸ್‌ಐ ಕಿರಣ್​​​ ಧೋತ್ರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ: ವಿಜಯಪುರ: ಜೆಸಿಬಿ ಯಂತ್ರದಲ್ಲಿ ಸಿಲುಕಿ ಚಾಲಕ, ಪೌರ ಕಾರ್ಮಿಕ ದಾರುಣ ಸಾವು

Last Updated : Sep 8, 2021, 10:38 PM IST

ABOUT THE AUTHOR

...view details