ಬಸವಕಲ್ಯಾಣ:ಅಸ್ವಚ್ಚ ಪರಿಸರದಿಂದ ಕಂಗೆಟ್ಟಿದ್ದ ನಗರದ ವಾರ್ಡ್ ನಂ. 11 ಹಾಗೂ 4ರ ವ್ಯಾಪ್ತಿಯಲ್ಲಿಯ ಪರಿಸರ ಸ್ವಚ್ಚತೆಗೆ ನಗರಸಭೆ ಮುಂದಾಗಿದ್ದು, ಜನರು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.
ಬಸವಕಲ್ಯಾಣ ಜನರಿಗೆ ರೋಗ, ಭಾಗ್ಯ ಕಾರಣ ? ಎನ್ನುವ ಶಿರ್ಷಿಕೆಯಡಿ ನ. 29ರಂದು ಈ ಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ನಗರಸಭೆ ನೈರ್ಮಲ್ಯ ನಿರೀಕ್ಷಕ ಝರನಪ್ಪ ರಾಸೂರೆ ನೇತೃತ್ವದಲ್ಲಿ ವಿವಿಧ ಓಣಿಗಳಿಗೆ ತೆರಳಿ ಅಸ್ವಚ್ಚ ಪರಿಸರವನ್ನು ಸ್ವಚ್ಚಗೊಳಿಸಲು ಶ್ರಮಿಸಿದರು.