ಕರ್ನಾಟಕ

karnataka

ETV Bharat / state

ಚುನಾವಣೆ ಕರ್ತವ್ಯದಲ್ಲಿ ಸಾರಿಗೆ ಬಸ್​​ಗಳು... ಪ್ರಯಾಣಿಕರ ಪರದಾಟ! - kannada news

ಬಸ್​ಗಳ ಅಭಾವ ಉಂಟಾಗಿ ಮತದಾನಕ್ಕಾಗಿ ಊರಿಗೆ ಬಂದ ಪ್ರಯಾಣಿಕರು ತಮ್ಮೂರಿಗೆ ಹೋಗಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ

By

Published : Apr 23, 2019, 9:04 PM IST

ಬೀದರ್: ಮತ ಹಾಕಲು ಬಂದ ಜನರಿಗೆ ಸಾರಿಗೆ ವ್ಯವಸ್ಥೆಯಿಲ್ಲದೆ ದೂರ ದೂರದಿಂದ ಬಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್​​ಗಳಿಲ್ಲದೆ ಪರದಾಡಬೇಕಾಯಿತು.

ನಿನ್ನೆಯಿಂದ ಚುನಾವಣೆ ಕರ್ತವ್ಯದ ಮೇಲೆ ಈಶಾನ್ಯ ಸಾರಿಗೆ ಸಂಸ್ಥೆ ಬಸ್​ಗಳು ನಿಯೋಜಿತಗೊಂಡಿದ್ದರಿಂದ ದೂರ ದೂರದಿಂದ ಬಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್​ಗಳಿಲ್ಲದೆ ಪರದಾಡಿದರು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೆ ಬಸ್​ಗಳ ಅಭಾವ ಉಂಟಾಗಿ ಮತದಾನಕ್ಕಾಗಿ ಬಂದ ಪ್ರಯಾಣಿಕರು ತಮ್ಮೂರಿಗೆ ಹೋಗಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಬಸ್​ಗಳಿಲ್ಲದೆ ಪ್ರಯಾಣಿಕರ ಪರದಾಟ

ಬೀದರ್-ಭಾಲ್ಕಿ, ಔರಾದ್, ಹುಮನಾಬಾದ್ ಸೇರಿದಂತೆ ಸ್ಥಳೀಯ ಮಾರ್ಗಗಳಲ್ಲಿ ಬಸ್​ಗಳ ಓಡಾಟ ಕಡಿಮೆಯಾಗಿದ್ದಕ್ಕೆ ಜನರು ಸಂಕಷ್ಟ ಎದುರಿಸಬೇಕಾಯಿತು. ಜಿಲ್ಲೆಯಲ್ಲಿ ಒಟ್ಟು 586 ಬಸ್​ಗಳ ಪೈಕಿ 246 ಬಸ್​ಗಳು ಚುನಾವಣೆ ಕರ್ತವ್ಯದಲ್ಲಿರುವುದರಿಂದ ಜನರು ಪ್ರಯಾಣದ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವಂತಾಯಿತು.

ಜಿಲ್ಲೆಯಲ್ಲಿರುವ ಖಾಸಗಿ ವಾಹನಗಳು ಕೂಡ ಅಧಿಕಾರಿಗಳ ಓಡಾಟಕ್ಕೆ ನಿಯೋಜನೆ ಮಾಡಿದಕ್ಕಾಗಿ ಖಾಸಗಿ ವಾಹನಗಳ ಸಂಚಾರ ಕೂಡ ಸ್ಥಗಿತವಾಗಿದ್ದು, ಜನರು ಒಂದೂರಿಂದ ಮತ್ತೊಂದುರಿಗೆ ಸಂಚರಿಸಲು ಬಸ್​ಗಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ABOUT THE AUTHOR

...view details