ಕಲಬುರಗಿ/ಬೀದರ್:ರಾಜ್ಯದಲ್ಲಿ ಕೊರೊನಾ ಮಹಾಮಾರಿ ಮುಂದುವರೆದಿದ್ದು ಕಲಬುರಗಿಯಲ್ಲಿ ಮತ್ತೆ 40 ಜನರಲ್ಲಿ ಸೋಂಕು ಕಾಣಿಸಿಕೊಂಡರೆ, ಬೀದರ್ ಜಿಲ್ಲೆಯಲ್ಲಿ 10 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಎರಡೂ ಜಿಲ್ಲೆಗಳಲ್ಲಿ ಸೊಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.
ಕಲಬುರಗಿಯಲ್ಲಿ 40, ಬೀದರ್ ಜಿಲ್ಲೆಯಲ್ಲಿ 10 ಜನರಲ್ಲಿ ಕೊರೊನಾ ಸೋಂಕು ದೃಢ - Bidar district Corona information
ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಇಂದಿನ ಕೊರೊನಾ ಮಾಹಿತಿ ಇಂತಿದೆ...
ಕಲಬುರಗಿ ಜಿಲ್ಲೆಯಲ್ಲಿ 40 ಜನರಿಗೆ ಸೋಂಕು ತಗುಲಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 18,939ಕ್ಕೆ ತಲುಪಿದೆ. ಇಂದು ಯಾವುದೆ ಮರಣ ಪ್ರಕರಣ ವರದಿಯಾಗಿಲ್ಲ. ಇಲ್ಲಿವರೆಗೆ 298 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು 62 ಜನ ಸೋಂಕಿನಿಂದ ಬಿಡುಗಡೆ ಹೊಂದಿದ್ದಾರೆ. 17,551 ಜನ ಸೋಂಕಿತರು ಇವರೆಗೂ ಗುಣಮುರಾಗಿದ್ದಾರೆ. 1090ಜನ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀದರ್ ಜಿಲ್ಲೆಯಲ್ಲಿ 10 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು 22 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,788 ಕ್ಕೆ ಏರಿಕೆಯಾಗಿದ್ದು 6404 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 163 ಜನ ಸಾವನಪ್ಪಿರುವ ವರದಿ ಇದೆ. 217 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.