ಬೀದರ್:ವಾಯುಭಾರ ಕುಸಿತದಿಂದ ಧಾರಾಕಾರ ಮಳೆಯಾಗಿ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಜೀವನದಿ ಮಾಂಜ್ರಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ವೇಳೆ ಯುವಕರ ಗುಂಪೊಂದು ನದಿಗೆ ಹಾರಿ ಈಜಾಡುವ ದುಸ್ಸಾಹಸ ಮಾಡಿರುವ ಘಟನೆ ನಡೆದಿದೆ.
ತುಂಬಿದ ಮಾಂಜ್ರಾ ನದಿಯಲ್ಲಿ ಪುಂಡರ ಹುಚ್ಚಾಟ: ಡಿಸಿ ಮನವಿಗೂ ಮೀರಿ ದುಸ್ಸಾಹಸ - Manjra river For Swimming
ಬೀದರ್ ಜಿಲ್ಲೆಯ ಮಾಂಜ್ರಾ ನದಿಯ 50 ಅಡಿ ಸೇತುವೆಯ ಮೇಲಿಂದ ಮೂವರು ಯುವಕರು ನದಿಗೆ ಹಾರಿ ಈಜಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಾಂಜ್ರಾ ನದಿಗೆ ಹಾರಿ ದುಸ್ಸಾಹಸ ಮಾಡಿದ ಪುಂಡರು
ಔರಾದ್ ತಾಲೂಕಿನ ಕೌಠಾ ಗ್ರಾಮದ ಬೀದರ್-ನಾಂದೇಡ ಹೆದ್ದಾರಿಯ ಸಮೀಪವಿರುವ ಮಾಂಜ್ರಾ ನದಿಯಲ್ಲಿ ಅಂದಾಜು 50 ಅಡಿ ಎತ್ತರದ ಸೇತುವೆ ಮೇಲಿಂದ ಮೂವರು ಯುವಕರು ನೀರಿಗೆ ಹಾರಿದ್ದಾರೆ. ಹಲವು ಯುವಕರ ಗುಂಪು ಸೇತುವೆ ಮೇಲೆ ಜಮಾಯಿಸಿ ನೀರಿಗೆ ಹಾರುತ್ತಿದ್ದ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಜಿಲ್ಲೆಯಲ್ಲಿ ನದಿಗಳು, ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಕಳೆದೆರಡು ದಿನಗಳ ಹಿಂದೆಯೇ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು, ಯಾರೂ ಅಪಾಯದ ಸಾಹಸ ಮಾಡದಿರಲು ಮನವಿ ಮಾಡಿದ್ದರು.