ಕರ್ನಾಟಕ

karnataka

ETV Bharat / state

ಬೀದರ್: ಹಳ್ಳ ದಾಟುತ್ತಿದ್ದ ಒಂದೇ ಕುಟುಂಬದ ಮೂವರು ನೀರುಪಾಲು - etv bharat kannada

ಹಳ್ಳ ದಾಟುತ್ತಿದ್ದಾಗ ಒಂದೇ ಕುಟುಂಬದ ಮೂವರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಔರಾದ್‌ನಲ್ಲಿ​ ನಡೆದಿದೆ.

three-of-the-same-family-were-washed-away-in-gorge
ಬೀದರ್: ಹಳ್ಳದಲ್ಲಿ ಕೊಚ್ಚಿಹೋದ ಒಂದೇ ಕುಟುಂಬದ ಮೂವರು

By

Published : Apr 30, 2023, 10:09 PM IST

ಬೀದರ್: ಜಿಲ್ಲೆಯಲ್ಲಿ ಅಕಾಲಿಕ ಮಳೆ ಮುಂದುವರೆದಿದೆ. ಇಂದು (ಭಾನುವಾರ) ಸುರಿದ ಭಾರಿ ಮಳೆಗೆ ಹಳ್ಳಗಳು ನದಿಯಂತಾಗಿವೆ. ಒಂದೇ ಕುಟುಂಬದ ಮೂವರು ಹಳ್ಳ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋದ ಘಟನೆ ಔರಾದ್ ತಾಲೂಕಿನ ಹೆಡಗಾಪೂರ್ ಗ್ರಾಮದಲ್ಲಿ ಸಂಜೆ ನಡೆದಿದೆ. ಸುನಂಧಾ ಸಂಗಪ್ಪ ಲದ್ದೆ, ಮಗ ಸುಮಿತ್​ ಹಾಗೂ ಮಗಳು ಐಶ್ವರ್ಯ ನಾಪತ್ತೆಯಾಗಿದ್ದಾರೆ.

ಸಂಗಪ್ಪ ಲದ್ದೆ ಜೊತೆ ಜಮೀನಿಗೆ ತೆರಳಿ ಹಿಂದಿರುಗುವಾಗ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಹಳ್ಳದಲ್ಲಿ ಏಕಾಏಕಿ ನೀರು ಹೆಚ್ಚಾಗಿದ್ದರಿಂದ ತಾಯಿ, ಮಕ್ಕಳು ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಸಂಗಪ್ಪ ಲದ್ದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ಔರಾದ್ ತಹಶೀಲ್ದಾರ್ ಮಲ್ಲಿಕಾರ್ಜುನ, ಭಾಲ್ಕಿ ವಿಭಾಗದ ಎಎಸ್​ಪಿ ಪೃಥ್ವಿಕ ಶಂಕರ, ಕಮಲನಗರ ಸಿಪಿಐ ಪಂಡಿತ್ ಸಗರ ಹಾಗೂ ಕುಶನೂರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ:20 ಗಂಟೆ ಅವಶೇಷಗಳಡಿ ಸಿಲುಕಿದ ವ್ಯಕ್ತಿಯ ಪ್ರಾಣ ಕಾಪಾಡಿದ ಸಿಬ್ಬಂದಿ; ಜನ್ಮದಿನದಂದೇ ಸಿಕ್ತು ಮರು ಹುಟ್ಟು!

ABOUT THE AUTHOR

...view details