ಬೀದರ್:ಕೊರೊನಾ ಭೀಕರತೆ ಮುಂದುವರೆದಿದ್ದು, ಜಿಲ್ಲೆಯಲ್ಲಿ ಇಂದು ಮತ್ತೆ ಮೂವರು ಬಲಿಯಾಗಿದ್ದಾರೆ. 98 ಜನರಲ್ಲಿ ಸೋಂಕು ಧೃಡಪಟ್ಟಿದೆ.
ಬೀದರ್: ಕೊರೊನಾಗೆ ಮೂವರು ಬಲಿ, 98 ಜನರಿಗೆ ಸೋಂಕು...! - Bidar latest news
ಮಾಹಾಮಾರಿ ಕೊರೊನಾಗೆ ಬೀದರ್ ಜಿಲ್ಲೆಯಲ್ಲಿ ಇಂದು ಮೂವರು ಬಲಿಯಾಗಿದ್ದಾರೆ. ಹೀಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
56 ವಯಸ್ಸಿನ ಮಹಿಳೆ, 65 ವಯಸ್ಸಿನ ಇಬ್ಬರು ಪುರುಷರು ಆ. 04 ರಂದು ಸಾವನ್ನಪ್ಪಿದ್ದು, ಎಲ್ಲರ ಗಂಟಲು ದ್ರವದ ಮಾದರಿ ಪರಿಕ್ಷೆ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ.
ಜಿಲ್ಲೆಯಲ್ಲಿ ಇಂದು 98 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2712ಕ್ಕೆ ಏರಿಕೆಯಾಗಿದೆ. ಇಂದು 97 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದು, ಇಲ್ಲಿಯವರೆಗೆ 1805 ಜನರು ಗುಣಮುಖರಾಗಿದ್ದಾರೆ.