ಕರ್ನಾಟಕ

karnataka

ETV Bharat / state

ಬೀದರ್​​​ನಲ್ಲಿ ಕೊರೊನಾ ಅಟ್ಟಹಾಸ: ಮೂವರು ಬಲಿ, 18 ಜನರಿಗೆ ಸೋಂಕು - ಕರ್ನಾಟಕ ಕೊರೊನಾ ಪ್ರಕರಣೌ

ರಾಜ್ಯದಲ್ಲಿ ದಾಖಲೆ ಸಂಖ್ಯೆಯ ಕೊರೊನಾ ಪ್ರಕರಣ ದಾಖಲಾದ ಬೆನ್ನಲ್ಲೆ ಬೀದರ್​​ನಲ್ಲಿ ಇಂದು ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೆ ಹೊಸ 18 ಪ್ರಕರಣಗಳು ಸಹ ದಾಖಲಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

Three corona infecters died and new 18 cases reported in Bidar
ಬೀದರ್​​​ನಲ್ಲಿ ಕೊರೊನಾ ಅಟ್ಟಹಾಸ: ಮೂವರು ಬಲಿ, 18 ಜನರಿಗೆ ಸೋಂಕು

By

Published : Jun 27, 2020, 11:31 PM IST

ಬೀದರ್:ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದು, ಜನತೆಯಲ್ಲಿ ಆತಂಕ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 18 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 555 ಏರಿಕೆಯಾಗಿದೆ. ನಗರದ ಒಲ್ಡ್ ಸಿಟಿಯ ಡಿಸೇಂಟ್ ಫಂಕ್ಷನ್ ಹಾಲ್ ಹತ್ತಿರದ ದುಲ್ಹನ ದರ್ವಾಜ ರೋಡ್​​​ ಬಳಿಯ 70 ವರ್ಷದ ವ್ಯಕ್ತಿ, ಬಸವಕಲ್ಯಾಣ ನಗರದ ತ್ರೀಪುರಾಂತ ಬಡಾವಣೆಯ 73 ವರ್ಷದ ಮಹಿಳೆ ಹಾಗೂ ಭಾಲ್ಕಿ ತಾಲೂಕಿನ ಹುಪಳಾ ಗ್ರಾಮದ 65 ವರ್ಷದ ವ್ಯಕ್ತಿ ಸಾವನಪ್ಪಿದ್ದು ಸಾವಿನ ನಂತರ ಪರಿಕ್ಷಾ ವರದಿ ಪಾಸಿಟಿವ್ ಆಗಿದೆ ಎನ್ನಲಾಗಿದೆ.

ಉಳಿದ 15 ಸೋಂಕಿತರ ಪೈಕಿ ಬೀದರ್ ತಾಲೂಕಿನ ಬೆಳ್ಳುರ-01, ಹುಮನಾಬಾದ್ ತಾಲೂಕಿನ ಘಾಟಬೋರಾಳ-01, ಚಂದನಹಳ್ಳಿ-01, ಬೀದರ್ ತಾಲೂಕಿನ ಜನವಾಡ-01, ನಗರದ ನೌಬಾದ್ -01, ಚಿಟಗುಪ್ಪ-07, ಬಸವಕಲ್ಯಾಣ-01, ಬೀದರ್-02 ಜನ ಸೋಂಕಿತರಾಗಿದ್ದಾರೆ

ABOUT THE AUTHOR

...view details